Ad

ಜಮ್ಮು ಕಾಶ್ಮಿರದಲ್ಲಿ ತಿಕೋಟಾ ಯೋಧ ರಾಜು ಗಿರಮಲ್ಲ ಹುತಾತ್ಮ

Soildr

ತಿಕೋಟಾ: ಜಮ್ಮು ಕಾಶ್ಮಿರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತದ್ದ ಪಟ್ಟಣದ ವೀರಯೋಧ ರಾಜು ಗಿರಮಲ್ಲ ಕರಜಗಿ ಹುತಾತ್ಮರಾಗಿದ್ದಾರೆ.

Ad
300x250 2

ಮಧ್ಯಪ್ರದೇಶ, ಪಂಜಾಬ್, ಆಸ್ಸಾಂ, ಜಮ್ಮು ಕಾಶ್ಮಿರದಲ್ಲಿ ಕರಜಗಿ ಅವರು 15 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಎರಡು ವರ್ಷಗಳ ಹಿಂದಷ್ಟೇ ಹವಾಲ್ದಾರರಾಗಿ ಪದೋನ್ನತಿ ಹೊಂದಿದ್ದರು.

10 ವರ್ಷಗಳ ಹಿಂದೆ ಅಕ್ಕನ ಮಗಳ ಜೊತೆ ಮದುವೆಯಾಗಿತ್ತು. ಅವರಿಗೆ ಪತ್ನಿ, ತಾಯಿ, ಸಹೋದರ, ಸಹೋದರಿ ಇದ್ದಾರೆ. ಯೋಧ ಹುತಾತ್ಮರಾಗಿರುವ ಸುದ್ದಿ ತಿಳಿದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಯೋಧನ ಪಾರ್ಥಿವ ಶರೀರ ಶ್ರೀನಗರದಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಮಂಗಳವಾರ ರಾತ್ರಿ ಬರಲಿದ್ದು, ಅಲ್ಲಿಂದ ಸ್ವಗ್ರಾಮಕ್ಕೆ ಅಂಬುಲೆನ್ಸ್‌ ಮೂಲಕ ಬರಲಿದೆ.

ಸ್ವಗ್ರಾಮ ತಿಕೋಟಾ ಪಟ್ಟಣದಲ್ಲಿ ಜುಲೈ 3ರಂದು (ಬುಧವಾರ) ಅಂತ್ಯಸಂಸ್ಕಾರ ನಡೆಯಲಿದೆ ಎಂದು ಜಿಲ್ಲಾಡಳಿತ ಹಾಗೂ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad