Bengaluru 23°C
Ad

ಶ್ರೇಯಸ್‌ ಗೆಲುವಿನ ಆಚರಣೆಯಲ್ಲಿ ಜೆಡಿಎಸ್ ಬಾವುಟ : ಇಬ್ಬರು ಪೊಲೀಸ್ ವಶಕ್ಕೆ

ಲೋಕಸಭಾ ಚುನಾವಣೆಯ ಫಲಿತಾಂಶ ಇಂದು(ಜೂ.04) ಬಂದಿದ್ದು, ಹಾಸನ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರು ಪ್ರಜ್ವಲ್​ ರೇವಣ್ಣ ಅವರನ್ನು ಹೆಚ್ಚಿನ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ಹಾಸನ : ಲೋಕಸಭಾ ಚುನಾವಣೆಯ ಫಲಿತಾಂಶ ಇಂದು(ಜೂ.04) ಬಂದಿದ್ದು, ಹಾಸನ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರು ಪ್ರಜ್ವಲ್​ ರೇವಣ್ಣ ಅವರನ್ನು ಹೆಚ್ಚಿನ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ಗೆಲುವಿನ ಬಳಿಕ ಶ್ರೇಯಸ್‌ ಪಟೇಲ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರೇಯಸ್‌ ಪಟೇಲ್‌ಗೆ ಭರ್ಜರಿ ಸ್ವಾಗತ ಕೋರಿದರು. ಕಾಂಗ್ರೆಸ್ ಕಾರ್ಯಕರ್ತರು, ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಅವರನ್ನು ಬರಮಾಡಿಕೊಂಡರು. ಬಳಿಕ ಶ್ರೇಯಸ್‌ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಜೆಡಿಎಸ್ ಬಾವುಟ ಹಿಡಿದು ಬೈಕ್‌ನಲ್ಲಿ ಬಂದ ಇಬ್ಬರು ಕಾಂಗ್ರೆಸ್ ನಡುವೆ ನಡುವೆ ಜೆಡಿಎಸ್‌ ಬಾವುಟ ಪ್ರದರ್ಶನ ಮಾಡಿದರು. ಕೂಡಲೇ ಆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.

Ad
Ad
Nk Channel Final 21 09 2023
Ad