Ad

ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

Advika

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ.

Ad
300x250 2

ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಇದೀಗ, ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

‘ಈ ಘಟನೆ ನನಗೆ ಬೇಸರ ತಂದಿದೆ. ಯಾರೂ ಕೂಡ ಯಾರಿಗೂ ಕೆಟ್ಟ ಕಮೆಂಟ್ ಮಾಡಬೇಡಿ..ಕೆಟ್ಟ ಕಮೆಂಟ್ ಮಾಡುವರನ್ನ ಬ್ಲಾಕ್ ಮಾಡಿಬಿಡಿ.. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಷ್ಟೇ. ದರ್ಶನ್ ಸರ್ ನಮ್ಮ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಬಂದಿದ್ದರು.. ಆವತ್ತು ಸಿಕ್ಕಾಗ ಚೆನ್ನಾಗಿ ಮಾತನಾಡಿಸಿದ್ದರು. ಮತ್ತೆ ಯಾವತ್ತೂ ಮುಖಾಮುಖಿ ಭೇಟಿ ಆಗಿಲ್ಲ. ಈ ಕೇಸ್‌ನಲ್ಲಿ ನಟ ದರ್ಶನ್ ಸರ್ ನಿರಪರಾಧಿ ಎಂದೆನಿಸಿ ಆಚೆ ಬರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಅದ್ವಿತಿ ಶೆಟ್ಟಿ.

Ad
Ad
Nk Channel Final 21 09 2023
Ad