Ad

ಯುರೋ ಕಪ್‌ ಫುಟ್‌ಬಾಲ್‌: ಕ್ವಾರ್ಟರ್‌ ಫೈನಲ್‌ಗೆ ಪೋರ್ಚುಗಲ್‌

Quarter Finals

ಜರ್ಮನಿ: ಗೋಲ್‌ಕೀಪರ್‌ ಡಿಯೊಗೊ ಕೋಸ್ಟಾ ಮೂರು ಗೋಲು ಯತ್ನಗಳನ್ನು ಅಮೋಘವಾಗಿ ತಡೆದು ಪೋರ್ಚುಗಲ್‌ ಗೆಲುವಿನ ರೂವಾರಿಯಾದರು. ಸೋಮವಾರ ತಡರಾತ್ರಿ ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯ ರೋಚಕ ಹಣಾಹಣಿಯಲ್ಲಿ ಸ್ಲೊವೇನಿಯಾ ತಂಡವನ್ನು ‘ಪೆನಾಲ್ಟಿ’ಯಲ್ಲಿ ಸೋಲಿಸಿದ ಪೋರ್ಚುಗಲ್‌ ತಂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.

Ad
300x250 2

ನಿಗದಿತ ಅವಧಿಯ ಪಂದ್ಯವು ಗೋಲಿಲ್ಲದೇ ‘ಡ್ರಾ’ ಆಯಿತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್‌ 3-0 ಯಿಂದ ಜಯ ಸಾಧಿಸಿತು. ಪೋರ್ಚುಗಲ್ ತಂಡವು ಜೂನ್‌ 6ರಂದು ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ.

ಪಂದ್ಯದ ಮೊದಲಾರ್ಧದ ‘ಇಂಜ್ಯುರಿ ಟೈಮ್‌’ ಅವಧಿಯಲ್ಲಿ ಪೋರ್ಚುಗಲ್‌ನ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿ, ಮೈದಾನದಲ್ಲೇ ಕಣ್ಣೀರು ಹಾಕಿದರು. 39 ವರ್ಷದ ರೊನಾಲ್ಡೊ ಗೋಲು ದಾಖಲಿಸುತ್ತಿದ್ದರೆ ಯುರೋ ಕಪ್‌ನಲ್ಲಿ ಸ್ಕೋರ್‌ ಗಳಿಸಿದ ಅತಿ ಹಿರಿಯ ವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಪಾತ್ರವಾಗುತ್ತಿದ್ದರು.

Ad
Ad
Nk Channel Final 21 09 2023
Ad