Bengaluru 23°C
Ad

ಕಾಲೇಜು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಥಮ ಪಿಯುಸಿ ವಿದ್ಯಾರ್ಥಿನಿ

Baby (1)

ಕೋಲಾರ: ಕೋಲಾರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಈಗಷ್ಟೇ ಹದಿ ಹರೆಯದ ವಯಸ್ಸಿಗೆ ಕಾಲಿಟ್ಟ ಬಾಲಕಿ ಪ್ರೌಢಶಾಲೆಗೆ ಹೋಗುವಾಗಲೇ ಆಕೆಯ ಮನಸ್ಸು ಕೆಡಿಸಿದ್ದ ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇನ್ನು ಯುವತಿ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಳಾಗಿ ಪಿಯು ಕಾಲೇಜು ಸೇರಿದ್ದಾಳೆ. ಆದರೆ, ಕಾಲೇಜಿನ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

Ad
300x250 2

ಹೌದು. . ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಅನಾಮಿಕ ವ್ಯಕ್ತಿ ಆಕೆಯನ್ನು ಲೈಂಗಿಕವಾಗಿಯೂ ಬಳಕೆ ಮಾಡಿಕೊಂಡಿದ್ದಾರೆ. ನಿರಂತರ ಅತ್ಯಾಚಾರ ಮಾಡಿದ ಪರಿಣಾಮ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ, ಬಾಲಕಿ ಗರ್ಭಿಣಿ ಆಗಿದ್ದರೂ ಈ ವಿಚಾರ ಹೆರಿಗೆ ಆಗುವವರೆಗೂ ಮನೆಯವರಿಗೆ ಗೊತ್ತಾಗದೇ ಹೇಗೆ ಗುಟ್ಟಾಗಿ ಕಾಪಾಡಿಕೊಳ್ಳಲಾಗಿತ್ತು ಎಂಬುದು ಆಶ್ಚರ್ಯಕ್ಕೆ ಒಳಗಾದ ವಿಚಾರವಾಗಿದೆ.

ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೇರಿದ್ದ ವಿದ್ಯಾರ್ಥಿನಿ ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿಗೆ ಹೋದ ಬಳಿಕ ಹೆರಿಗೆ ನೋವು ಕಾಣಿಸಿಕೊಂಡು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಕಾಲೇಜಿನ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ.

ಅಪ್ತಾಪ್ತ ಬಾಲಕಿಯ ತಲೆಕೆಡಿಸಿ ಗರ್ಭಿಣಿ ಮಾಡಿದವನಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಅತ್ಯಾಚಾರ ಮಾಡಿದ ಯುವಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad