Ad

ಹತ್ರಾಸ್‌ನಲ್ಲಿ ಹೆಣಗಳ ರಾಶಿ; ಕಾಲ್ತುಳಿತಕ್ಕೆ ಅಸಲಿಗೆ ಆಗಿದ್ದೇನು?

Hathras Baba

ಉತ್ತರಪ್ರದೇಶ: ಹತ್ರಾಸ್ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ದುರಂತವೊಂದು ಸಂಭವಿಸಿದೆ. ಶಿವನ ಆರಾಧನೆ ಮಾಡಿ ವಾಪಸ್​ ಆಗುತ್ತಿದ್ದವರ ಮೇಲೆ ಏಕಾಏಕಿ ಜವರಾಯನ ದರ್ಶನವಾಗಿ ಬಿಟ್ಟಿದೆ. ಮಕ್ಕಳು ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಉಸಿರಾಡಲಾಗದೇ ದಾರುಣವಾಗಿ ಸಾವನ್ನಪ್ಪಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

Ad
300x250 2

ಹೌದು. . ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಧಾರ್ಮಿಕ ಸಮಾರಂಭವನ್ನ ಆಯೋಜನೆ ಮಾಡಲಾಗಿತ್ತು. ಹತ್ರಾಸ್​ನ ಭಾನ್ಪುರ್​ ಎಂಬ ಗ್ರಾಮದಲ್ಲಿ ವಿಶಾಲವಾದ ಬಯಲಿನಲ್ಲಿ ಟೆಂಟ್ ಹಾಕಿ, ಶಿವನ ಆರಾಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜನಸಂದಣಿ ಉಂಟಾಗಿದೆ.

ಭೋಲೆ ಬಾಬಾ ಪ್ರವಚನ ನಡೆಯುತ್ತಿದ್ದ ಸಂದರ್ಭಲ್ಲಿ ಕಾಲ್ತುಳಿತ ಸಂಭವಿಸಿಬಿಟ್ಟಿದೆ. ಬಯಲಿನಲ್ಲಿ ಹಾಕಲಾಗಿದ್ದ ಟೆಂಟ್​ನೊಳಗೆ ಗಾಳಿಯಾಡಲು ಸಣ್ಣ ರಂಧ್ರವೂ ಇರಲಿಲ್ಲ. ಇದರ ಪರಿಣಾಮ ಟೆಂಟ್​ನೊಳಗೆ ಜನ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿ ಆಮ್ಲಜನಕದ ಕೊರತೆಯುಂಟಾಗಿದ್ದು, ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ.

ದುರದೃಷ್ಟವಶಾತ್, ಅಲ್ಲಿ ಒಂದೇ ಒಂದು ಪ್ರವೇಶದ್ವಾರವಿತ್ತು. ಉಸಿರಾಟದ ತೊಂದರೆಯಿಂದಾಗಿ ಪ್ರವೇಶದ್ವಾರದ ಕಡೆಗೆ ಏಕಾಏಕಿ ಜನರು ಓಡಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 116ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ತನಿಖೆ ಮುಂದುವರೆದಿದೆ. ಈ ದುರಂತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

 

Ad
Ad
Nk Channel Final 21 09 2023
Ad