Bengaluru 27°C
Ad

ಚೈಲ್ಡ್ ರವಿ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳು ವಶಕ್ಕೆ

ರೌಡಿಶೀಟರ್, ಚೈಲ್ಡ್ ರವಿ ಹತ್ಯೆಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ ತಿಳಿಸಿದರು.

ಹಾಸನ: ರೌಡಿಶೀಟರ್, ಚೈಲ್ಡ್ ರವಿ ಹತ್ಯೆಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಹತ್ಯೆ ಪ್ರಕರಣ ಸಂಬಂಧ ಹಾಸನ ನಗರದ ಪ್ರೀತಮ್ (೨೭), ಕೀರ್ತಿ( ೨೬), ರಂಗನಾಥ್ (೨೬), ಅಮಿತ್ (೩೧) ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ರವಿ ಹಾಗೂ ಪ್ರೀತಂ ನಡುವೆ ಕ್ಷುಲ್ಲಕ ಕಾರಣಕ್ಕೆ ಪದೇಪದೇ ಮಾತಿನ ಚಕಮಕಿ ಹಾಗೂ ಗಲಾಟೆಗಳು ನಡೆದಿದ್ದು. ಕೊಲೆ ನಡೆಯುವ ದಿನವೂ ಸಹ ಚೈಲ್ಡ್ ರವಿಯೊಂದಿಗೆ ಪ್ರೀತಂ ಮೊಬೈಲ್ ಸಂಭಾಷಣೆ ವೇಳೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.

ಹತ್ಯೆ ಆರೋಪಿ ಪ್ರೀತಮ್ ವಿರುದ್ಧ ಈಗಾಗಲೇ ನಾಲ್ಕು ಕೊಲೆ ಪ್ರಕರಣ ದಾಖಲಾಗಿದ್ದು , ಹತ್ಯೆಗೀಡಾದ ರವಿ ವಿರುದ್ಧ ಮರ್ಡರ್ ಸೇರಿದಂತೆ ೩೦೪, ೩೦೭, ೫೦೪ರ ಅಡಿ ಏಳು ಪ್ರಕರಣಗಳು ದಾಖಲಾಗಿದ್ದವು, ರವಿಯವರ ಹತ್ಯೆಯಾದ ನಂತರ ರವಿ ಪತ್ನಿ, ಪ್ರೀತಂ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು.

ಈ ದೂರಿನ ಅನ್ವಯ ತನಿಖೆ ಕೈಗೊಂಡು ಮಾಹಿತಿ ಕಲೆ ಹಾಕುವ ಮೂಲಕ ಜೂನ್ ೬ ರಂದು ರಾತ್ರಿ ೮ ಗಂಟೆಗೆ ಹಾಸನ ತಾಲೂಕಿನ ಗ್ಯಾರಹಳ್ಳಿ ಮಧ್ಯದ ಅಂಗಡಿ ಬಳಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಎಸ್ಪಿ ತಿಳಿಸಿದರು.

ರೌಡಿಸಂ ವಿರುದ್ಧ ಕಠಿಣ ಕ್ರಮ:
ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹಾಗೂ ರೌಡಿಸಂ ತಹ ಬದಿಗೆ ತರುವಲ್ಲಿ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಚುನಾವಣೆ ಸಂದರ್ಭದಲ್ಲಿಯೂ ೫೯ ಮಂದಿಯನ್ನು ಗಡಿಪಾರು ಮಾಡಲಾಗಿತ್ತು ಎಂದು ಎಸ್ಪಿ ವಿವರಿಸಿದರು. ಅಪರಾಧ ಪ್ರಕರಣವನ್ನು ತಡೆಯುವ ನಿಟ್ಟಿನಲ್ಲಿ ಗೊಂಡಾ ಕಾಯ್ದೆಯಡಿ ೧೧ ಮಂದಿ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.

Ad
Ad
Nk Channel Final 21 09 2023
Ad