Showing 20 of 2478 posts • Page 43 of 124
: ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಮಂಡಲ ಪೂಜೆಗಾಗಿ ಇಂದಿನಿಂದ ತೆರೆದಿದ್ದು ಡಿ.26ರ ತನಕ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ.
ಮಹಿಳೆಯರ ಮೇಲೆ ನಡೆಸಿರುವ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ತ್ಯಾಜ್ಯವಾಗಿ ಮಾರ್ಪಡುವ ವಸ್ತುಗಳನ್ನು ಶಬರಿಮಲೆಗೆ ಭೇಟಿ ನೀಡುವ ಭಕ್ತರು ತಮ್ಮ ಇರುಮುಡಿಕಟ್ಟುವಿನಲ್ಲಿ ಕರ್ಪೂರ, ಅಗರಬತ್ತಿ ತರದಂತೆ ತಿರುವಾಂಕೂರು ದೇವಸ್ವಂ ಮಂಡಳಿ ವಿನಂತಿಸಿದೆ.
ಚಲಿಸುತ್ತಿರುವ ರೈಲನ್ನು ಹತ್ತಬೇಡಿ ಎಂದು ರೈಲ್ವೆ ಇಲಾಖೆ ಎಷ್ಟೇ ಮನವಿ ಮಾಡಿದರೂ ಜನ ಮಾತ್ರ ಮತ್ತೆ ಮತ್ತೆ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಕಾರನ್ನು ಕೇರಳದ ಕಾಸರಗೋಡು ಜಿಲ್ಲೆಯ ಬೋವಿಕಾನ ಎಂಬಲ್ಲಿ ತಡೆಯೊಡ್ಡಿ ದಾಳಿ ನಡೆಸಿದ ಪ್ರಕರಣ ನಡೆದಿದೆ.
30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಬಸ್ ಕಮರಿಗೆ ಉರುಳಿ ಬಿದ್ದ ಭೀಕರ ಘಟನೆ ಇಂದು ಬೆಳಗ್ಗಿನ ಜಾವ ಉತ್ತರಖಂಡಾದ ಅಲ್ಮೋರಾದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರದ ಬಳಿ ನಡೆದ ಗ್ರೆನೇಡ್ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಮಹಿಳೆಯೋರ್ವಳನ್ನು ಮುಂಬೈ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ರಸ್ತೆ ಬದಿ ಸಿಗುವ ಮೊಮೋಸ್ ತಿಂದು ಮಹಿಳೆ ಸಾವನಪ್ಪಿ, 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.
ಕೀರ್ತಿ, ಹೆಸರು ಇತ್ಯಾದಿಗಳ ಅಭಿಲಾಷೆಗೆ ಯಿಲ್ಲದೆ ಸಮಾಜ ಸೇವೆಯತ್ತ ಸಂಘಟನೆಗಳು ಹೆಚ್ಚಿನ ಗಮನ ಹರಿಸುವಂತಾಗಲಿ. ಕೀರ್ತಿ, ಹೆಸರು ಇತ್ಯಾದಿಗಳ ಅಭಿಲಾಷೆಗೆ ಬಯಸಿದಲ್ಲಿ ಸಂಘಟನೆಗಳು ಕುಂಟಿತವಾಗಲು ಸಾಧ್ಯ.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 24 ವರ್ಷಗಳಿಂದ ಹಿಂದಿನ ಎಲ್ಲಾ ಅಧ್ಯಕ್ಷರುಗಳ ಅವಧಿಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಸತತ ಪ್ರಯತ್ನಿಸಿ ಯಶಸ್ವಿಯ ಹಾದಿಯಲ್ಲಿ ಮುಂದುವರಿಯುತ್ತಾ ಇದೀಗ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ಪದಾರ್ಪಣೆ ಮಾಡಿದೆ.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ `ಇರುಮುಡಿ’ಯನ್ನು ಸಾಗಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದರು.
ಶುಕ್ರವಾರ ರಾತ್ರಿ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ದೆಹಲಿಯ ಉತ್ತಮ ನಗರದ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಗಡಿಯಾಚೆಗಿನ ಕಳ್ಳಸಾಗಣೆ ಪಂಜಾಬ್ ಪೊಲೀಸರು ಭೇಧಿಸಿದ್ದು, ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಕೋಣೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿರುವ ಘಟನೆ ಗುರುಗ್ರಾಮದ ಸರಸ್ವತಿ ಎನ್ಪ್ಲೇವ್ನಲ್ಲಿ ನಡೆದಿದೆ.
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ತಮಿಳುನಾಡು ಪೊಲೀಸರು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಪ್ರತಿ ಅರ್ಜಿಯಲ್ಲಿ ಪ್ರತಿಷ್ಠಾನಕ್ಕೆ ಹೋದ ಅನೇಕ ಜನರು ನಾಪತ್ತೆಯಾಗಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 9 ಮಂದಿ ಗಾಯಗೊಂಡಿದ್ದಾರೆ.
ಶೂರ್ ನಿಂದ ಮುನ್ನಾರ್ ನ ಗಿರಿಧಾಮಕ್ಕೆ ಆನಂದದಾಯಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ಗುಂಪನ್ನು ಅಬಕಾರಿ ಅಧಿಕಾರಿಯೊಬ್ಬರು ಐದು ಗ್ರಾಂ ಗಾಂಜಾ ಮತ್ತು ಒಂದು ಗ್ರಾಂ ಹ್ಯಾಶಿಶ್ ಆಯಿಲ್ ಹೊಂದಿದ್ದಕ್ಕಾಗಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಗಾಂಜಾ ಮತ್ತು ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗೋವಾದ ತುಳುವರನ್ನು ಸಂಘಟಿಸಿ ಗಣೇಶ್ ಕೆ. ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ತುಳುಕೂಟ ಗೋವಾ ಘಟಕ ಅದ್ದೂರಿ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆಗೊಂಡಿದೆ.