ಉತ್ತರ ಪ್ರದೇಶ : ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 2ಕೆಜಿ ಕೂದಲಿನ ಉಂಡೆ ಪತ್ತೆಯಾಗಿದ್ದು ವೈದ್ಯರೇ ಬೆಚ್ಚಿಬಿದ್ದಿರುವ ಘಟನೆ ನಡೆದಿದೆ.

31 ವರ್ಷದ ಮಹಿಳೆ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ, ವೈದ್ಯರು ಈಕೆಗೆ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಹೀಗೆ ಮಾಡಿದಾಗ ಮಹಿಳೆಯ ಹೊಟ್ಟೆಯಲ್ಲಿ 2 ಕೆಜಿ ತೂಕದ ಕೂದಲಿನ ಉಂಡೆ ಪತ್ತೆಯಾಗಿದೆ.

ಈ ಮಹಿಳೆ ಮಾನಸಿಕ ಅಸ್ವಸ್ಥತೆಯಾಗಿದ್ದು, ಟ್ರೈಕೊಲೊಟೊಮೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಮಹಿಳೆ ಕಳೆದ 15 ವರ್ಷಗಳಿಂದ ತನ್ನ ಕೂದಲನ್ನೇ ತಿನ್ನುತ್ತಿದ್ದರಂತೆ. ಹೀಗಾಗಿ ಹೊಟ್ಟೆಯ ಒಳಗೆ 2 ಕೆಜಿ ಕೂದಲು ಸಂಗ್ರಹವಾಗಿ ಹೊಟ್ಟೆ ನೋವು ಶುರುವಾಗಿದೆ ಎಂದು ವೈದ್ಯರು ಹೇಳಿದ್ದಾರೆ.