ಚೆನ್ನೈ: ನಿನ್ನೆ 2 ದಶಕಗಳ ಬಳಿಕ ನಡೆದ ಅತೀ ದೊಡ್ಡ ಏರ್​ ಶೋನಲ್ಲಿ ಭಾರೀ ಅವಘಡ ಸಂಭವಿಸಿದೆ. 15 ಲಕ್ಷಕ್ಕೂ ಅಧಿಕ ಜನರು ಸೇರಿದ್ದರಿಂದ ಚೆನ್ನೈನಲ್ಲಿ ದುರಂತವೇ ನಡೆದಿದೆ.

ಬಿಸಿಲಿನ ತಾಪಕ್ಕೆ ಹಾಗೂ ಕಾಲ್ತುಳಿತಕ್ಕೆ ಲಿಮ್ಕಾ ದಾಖಲೆ ಜೊತೆಗೆ ಸಾವಿನ ದಾಖಲೆಯೂ ಆಗಿದೆ. ಭಾರತೀಯ ವಾಯುಪಡೆ 92 ವರ್ಷ ಪೂರೈಸಿದ ಹಿನ್ನೆಲೆ ಚೆನ್ನೈನ ಮರೀನಾ ಬೀಚ್​ನಲ್ಲಿ ವಾಯುಪಡೆ ಏರ್‌ ಶೋ ಹಮ್ಮಿಕೊಂಡಿತ್ತು. ಈ ಸಾಹಸದಲ್ಲಿ ಒಟ್ಟು 72 ವಿಮಾನಗಳು ಭಾಗವಹಿಸಿ ವಿವಿಧ ಸಾಹಸ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವು.

ನಿನ್ನೆ ಭಾನುವಾರ ರಜೆ ಹಾಗೂ ಚೆನ್ನೈನಲ್ಲಿ ನಡೆದ ಅತಿ ದೊಡ್ಡ ಏರ್ ಶೋ ವೀಕ್ಷಿಸಲು ಜನರು ಮಕ್ಕಳು ಹಾಗೂ ವೃದ್ಧರೊಂದಿಗೆ ನೆರೆದಿದ್ದರು. ಏರ್​ ಶೋ ಕಣ್ತುಂಬಿಕೊಂಡು ಹಿಂದಿರುಗುತ್ತಿದ್ದ ಜನರಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಬಿಸಿಲಿನ ಝಳ ಹೆಚ್ಚಿದ ಕಾರಣ ಕೆಲವರು ತಲೆ ಸುತ್ತಿ ಬಿದ್ದಿದ್ದಾರೆ. ಇದರ ಜೊತೆಗೆ ಸರಿಯಾದ ನಿರ್ವಹಣೆ, ಪೂರ್ವ ಸಿದ್ಧತೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ ಐದಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

ಇನ್ನು ಬಿಸಿಲಿಗೆ ಪ್ರಜ್ಞೆ ತಪ್ಪಿದ 200ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮ ಆಯೋಜಕರು ಹಾಗೂ ತಮಿಳುನಾಡು ಸರ್ಕಾರ ಇದರಲ್ಲಿ ವಿಫಲವಾಗಿದೆ. ಇದರಿಂದ ಹಲವರು ರಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

https://x.com/karandarda/status/1843011527856799962?