ನವದೆಹಲಿ: ಭಾರತ ಹಾಗೂ ಮಾಲ್ಡೀವ್ಸ್ ದ್ವಿಪಕ್ಷೀಯ ಮೊದಲ ಮಾತುಕತೆ ಹಿನ್ನೆಲೆಯಲ್ಲಿ ಇಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತಕ್ಕೆ ಇಂದು ಆಗಮಿಸಿದರು.
ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಕಿರೀಟಿ ವರ್ಧನ್ ಸಿಂಗ್ ಸ್ವಾಗತಿಸಿದರು. ಅ.10ರವರೆಗೂ ಮುಯಿಝು ಭಾರತ ಪ್ರವಾಸದಲ್ಲಿರಲಿದ್ದಾರೆ. ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂತ್ರಿ ಮಂಡಲದ ಪ್ರಮಾಣ ವಚನ ಸಮಾರಂಭದಲ್ಲಿ ಮುಯಿಝು ಭಾಗವಹಿಸಿದ್ದರು.
ಈ ಭೇಟಿಯು ಎರಡು ದಕ್ಷಿಣ ಏಷ್ಯಾದ ನೆರೆಹೊರೆ ರಾಷ್ಟ್ರಗಳ ನಡುವಿನ ದುರ್ಬಲ ಸಂಬಂಧಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ. ಮಾಲ್ಡೀವ್ಸ್‌ನ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸಲು ಮುಯಿಜ್ಜು ಬದ್ಧರಾಗಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಅಭಿಪ್ರಾಯಪಟ್ಟಿದೆ.

