ದೆಹಲಿ: ರಾಮಲೀಲಾ ಕಾರ್ಯಕ್ರಮದ ವೇಳೆ ಭಗವಾನ್ ರಾಮನ ಪಾತ್ರವನ್ನು ಹಾಕಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ(ಅ.5ರಂದು) ನಡೆದಿದೆ. ದೆಹಲಿಯ ಶಹದಾರದಲ್ಲಿರುವ ಜೈ ಶ್ರೀರಾಮಲೀಲಾ ವಿಶ್ವಕರ್ಮ ನಗರದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುಶೀಲ್ ಕೌಶಿಕ್ (45) ಎಂದು ಗುರುತಿಸಲಾಗಿದ್ದು,ಇವರು ಪ್ರಾಪರ್ಟಿ ಡೀಲರ್ ಆಗಿದ್ದರು.

ರಾಮಲೀಲಾ ಕಾರ್ಯಕ್ರಮದಲ್ಲಿ ಇವರು ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ವೇಳೆ ವೇದಿಕೆಯಲ್ಲಿ ಪಾತ್ರವನ್ನು ನಿಭಾಯಿಸುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ವೇದಿಕೆಯ ಬದಿಗೆ ಹೋಗಿದ್ದಾರೆ. ಬದಿಗೆ ಸರಿಯುತ್ತಿದ್ದಂತೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ.