ಶಿಲ್ಲಾಂಗ್: ಮೇಘಾಲಯದ ದಕ್ಷಿಣ ಗಾರೋ ಪರ್ವತ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ದಿಢೀ‌ರ್ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಸಿಲುಕಿ ಒಂದೇ ಕುಟುಂಬದ ಏಳು ಮಂದಿ ಹಾಗೂ ಮತ್ತು ಮೂವರು ಸೇರಿ ಹತ್ತು ಜನರು ಮೃತಪಟ್ಟಿದ್ದಾರೆ.

ನಿರಂತರವಾಗಿ ಮಳೆಯಾದ ಪರಿಣಾಮ ಗಾಸುವಾಪಾರ ಎಂಬ ಪ್ರದೇಶದಲ್ಲಿ ಭೂಕುಸಿತ ಕೂಡ ಸಂಭವಿಸಿದೆ. ಈ ಪರಿಣಾಮ ಪ್ರವಾಹ ಮತ್ತಷ್ಟು ಯಮಸ್ವರೂಪಿಯಾಗಿ ಹರಿದುಬಂದಿದೆ. ಮೃತರ ಪೈಕಿ ಮೂವರು ಅಪ್ರಾಪ್ತರು ಎಂದು ತಿಳಿದುಬಂದಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾಕಾರ್ಯ ಆರಂಭವಾಗಿದ್ದು ,ಶೋಧ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣೆ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.