Showing 20 of 21629 articles • Page 193 of 1082
ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
2026ರ ಕೇರಳ ವಿಧಾನಸಭಾ ಚುನಾವಣೆಯ ಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಾಲಕ್ಕಾಡ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾರೋಷವಾಗಿ ಮೊಬೈಲ್ ಫೋನ್ ಮತ್ತು ಟೆಲಿವಿಷನ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇವಸ್ಥಾನಗಳಲ್ಲಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಬೆಟ್ಟೇನಹಳ್ಳಿಯ ದೇವಾಲಯದಲ್ಲಿ ಶ್ರೀರಾಮನವಮಿ ಹಬ್ಬದಂದು ಪ್ರಸಾದ ಸೇವಿಸಿದ ನೂರಾರು ಮಂದಿ ಗ್ರಾಮಸ್ಥರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಫುಡ್ ಪಾಯಿಸನ್ ಸಮಸ್ಯೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ.
ಸವಾರನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮಾರ್ಚ್ 28ರ ತಡರಾತ್ರಿ ಸಂಭವಿಸಿದೆ.
ಕರ್ನಾಟಕ ರಾಜ್ಯ ಮಹಾನಾಯಕ ಭೀಮರಾವ್ ಪತ್ತಿನ ಸಹಕಾರ ಸಂಘದ ರಾಜ್ಯಾಧ್ಯಕ್ಷರಾಗಿ ಚಿನ್ನಂಬಳ್ಳಿ ಸಿಆರ್ ಮಹದೇವ್ ಆಯ್ಕೆಯಾಗಿದ್ದಾರೆ.
ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.
ಗೋರಖ್ಪುರದ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆವಾಸ್ ವಿಕಾಸ್ ಕಾಲೋನಿ ಸಮೀಪದ ಗೋಡ್ಧೋಯಿಯಾ ಸೇತುವೆಯ ಬಳಿಯಿದ್ದ ಹಜರತ್ ಬಾಬಾ ಜಾಫರ್ ಅಲಿ ಶಾ ‘ಮಾಸೂಮ್’ ಅವರ ಮಜಾರ್ ಅನ್ನು ಜಿಲ್ಲಾಡಳಿತವು ಬುಲ್ಡೋಜರ್ ಬಳಸಿ ತೆರವುಗೊಳಿಸಿದೆ.
ಬೆಂಗಳೂರಿನ ಜನನಿಬಿಡ ನಂದಿನಿ ಲೇಔಟ್ನಲ್ಲಿ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಭೀಕರವಾಗಿ ಅಪಘಾತಕ್ಕೀಡಾಗಿದೆ. ಲಾರಿ ವೇಗವಾಗಿ ಬಂದು ರಸ್ತೆ ಬದಿಗೆ ಅಪ್ಪಳಿಸುವಾಗ ಅದರ ಪಕ್ಕದಲ್ಲೇ ಇದ್ದ ಇಬ್ಬರು ಬೈಕ್ ಸವಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಕಾಲ್ತುಳಿತದ ಘಟನೆಯಲ್ಲಿ ಪ್ರಾಣ ಕಳೆದುಕೊಂಡ 11 ಮಂದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಐಪಿಎಲ್ 2026ರ ಪಂದ್ಯದ ವೇಳೆ ವಿಶೇಷ ಗೌರವ ಸಲ್ಲಿಸಲಾಯಿತು.
ನವಮಂಗಳೂರು ಬಂದರು (NMPT) ಆವರಣದ ಭೂಭಾಗದಲ್ಲಿ ಇಂದು ಅನಿರೀಕ್ಷಿತವಾಗಿ ದೈತ್ಯ ಸುಂಟರಗಾಳಿಯೊಂದು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಇಂತಹ ದೃಶ್ಯಗಳು ಕಂಡುಬರುತ್ತವೆಯಾದರೂ, ಈ ಬಾರಿ ಭೂಮಿಯ ಮೇಲೆಯೇ ಧೂಳು ಮತ್ತು ಗಾಳಿ ಸುರುಳಿಯಾಕಾರದಲ್ಲಿ ಎತ್ತರಕ್ಕೆ ಜಿಗಿದಿರುವುದು ಕಂಡುಬಂದಿದೆ.
ಚಿರತೆ ಪ್ರತ್ಯಕ್ಷವಾಗಿರುವ ಘಟನೆ ಟಿ ನರಸೀಪುರ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಸಂಚಾರದ ದೃಶ್ಯ ಸೆರೆಯಾಗಿದೆ.
ಶಾಲಾ ಬಸ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಅಡಿಗಾಸ್ ಹೋಟೆಲ್ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸದನದಲ್ಲಿ ಹೈ ಕಮಾಂಡ್ ಅವಕಾಶ ಕೊಟ್ಟರೆ ನಾನೇ ಇನ್ನೆರಡು ಬಜೆಟ್ ಮಂಡನೆ ಮಾಡುತ್ತೇನೆ ಎಂಬ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬೈ ಎಲೆಕ್ಷನ್ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಎರಡು ಕಡೆ ನಾವು ಗೆಲ್ಲುತ್ತೇವೆ. ನಾನು ಕೂಡ ಪ್ರವಾಸ ಹೋಗುತ್ತಿದ್ದೇನೆ. ಬಾಗಲಕೋಟೆ, ದಾವಣಗೆರೆ ಎಲ್ಲಾ ಕಡೆ ಹೋಗುತ್ತೇನೆ ಎಂದರು.
ದ್ವಿಭಾಷಾ ನೀತಿ ಜಾರಿ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಿಂದಿ ಭಾಷೆ ಕಡ್ಡಾಯ ಮಾಡಬಾರದು ಅಂತ ಹೇಳಿದ್ದೇವೆ. ಈ ವರ್ಷದಿಂದಲೇ ಜಾರಿಯಲ್ಲಿರತ್ತೆ, ಸರ್ಕಾರ ತೀರ್ಮಾನ ಮಾಡಿದೆ ಎಂದರು
ಜಿಲ್ಲೆಯ ವಿವಿಧಡೆ ಶನಿವಾರ ರಾತ್ರಿ ಏಕಾಏಕಿ ಮಳೆ ಸುರಿದಿದೆ. ಈ ಅನಿರೀಕ್ಷಿತ ಮಳೆಯಿಂದ ಜನ ಕಂಗಲಾಗಿದ್ದಾರೆ. ಸುರಿಯುವ ಮಳೆಯಲ್ಲೇ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ರಥೋತ್ಸವ ನಡೆದಿದೆ.
ನಗರದಲ್ಲಿ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ವಾಹನ ಸವಾರರು ತೀರಾ ತೊಂದರೆ ಅನುಭವಿಸುವಂತಾಯಿತು.