Showing 20 of 20466 articles • Page 191 of 1024
ಬಜೆಟ್ ದಿನವೇ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ.
ಕರಾವಳಿಯ ರಾಜಕೀಯವೆಂದರೆ ಅದು ಕೆಸರು ಗದ್ದೆಯ ಕಂಬಳವಿದ್ದಂತೆ. ಇಲ್ಲಿ ಗೆಲುವಿನ ಓಟಕ್ಕೆ ಹುಮ್ಮಸ್ಸು ಬೇಕು, ಜೊತೆಗೆ ಪಕ್ಕದ ಜೋಡಿ ಕೋಣದ ಮೇಲೆ ಕಣ್ಣೂ ಇರಬೇಕು. ಮೊಯ್ಲಿ ಮತ್ತು ಪೂಜಾರಿ ಅವರ ಸಂಬಂಧವೂ ಅಷ್ಟೇ, ಅವರಿಬ್ಬರೂ ರಾಜಕೀಯ ಕಂಬಳದ ಕಣದಲ್ಲಿ ಒಟ್ಟಿಗೆ ಓಡಿದ ಚತುರ ಜೋಡಿಗಳು.
ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ ದೇಶದ ಆರ್ಥಿಕತೆಗೆ ಸಂಘ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ನುಡಿದರು.
ದಕ್ಷಿಣಕನ್ನಡ ಭಾಗದಲ್ಲಿ ಪಿಳಿಕುಳ ನಿಸರ್ಗಧಾಮವೆಂದರೆ ಮಕ್ಕಳ ಅಚ್ಚುಮೆಚ್ಚಿನ ತಾಣ ಆದರೆ ಅಧಿಕಾರಿಗಳ ನಿರ್ಲಕ್ಷ್ಯಹಾಗೂ ಬೇಜವಾಬ್ದಾರಿಯಿಂದ ಕರಾವಳಿಯ ಪ್ರಸಿದ್ಧ ಮೃಗಾಲಯದ ಅವ್ಯವವಸ್ಥೆ ಕಂಡು ಹೈ ಕೋರ್ಟ್ ನ್ಯಾಯಾಧೀಶರೇ ಶಾಕ್ ಹಾಕಿದ್ದು ತಕ್ಷಣ ಬಂದ್ ಮಾಡಿ ಎಂದು ಹೈಕೋರ್ಟ್ ನ್ಯಾಯಾಧಿಶರು ಸೂಚನೆ ನೀಡಿದ್ದಾರೆ.
ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಹುಡುಗ ಮನೆ ಹತ್ತಿರ ಆಟವಾಡುವ ಸಮಯದಲ್ಲಿ ಬೀದಿ ನಾಯಿ ಕಚ್ಚಿರುವ ಘಟನೆ ನಡೆದಿದೆ.
ನ್ಯಾಯವಾದಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ದಾಖಲೆಪತ್ರಗಳನ್ನು ಕಳುವುಗೈದ ಘಟನೆ ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪ ನಡೆದಿದೆ.
ಚಲಿಸುತ್ತಿದ್ದ ಬೈಕ್ ನಿಂದ ಬಿದ್ದು ಸಹಸವಾರೆಯೊಬ್ಬರು ಮೃತಪಟ್ಟ ಘಟನೆ ಉಡುಪಿ ಕಿನ್ನಿಮುಲ್ಕಿ ಜಾಯಿ ವೀಲ್ ಅಲೈನ್ಮೆಂಟ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮಹಾರಾಷ್ಟ್ರದ ಯುಟ್ಯೂಬರ್ ಆಕಾಶ್ ಜಾಧವ್ ನನ್ನು ಛತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಪೊಲೀಸರು ಗಾಂಜಾ ಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚ್ ಬಂಡುಕೋರರು ನಡೆಸಿದ ಸರಣಿ ದಾಳಿಗಳಲ್ಲಿ 80ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೆ ಬಿಡುಗಡೆ ಮಾಡಿದೆ.
ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ನಲ್ಲಿ ಕರ್ನಾಟಕ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಪ್ರಕಟಿಸದೆ ಮತ್ತೊಮ್ಮೆ ಚೊಂಬು ನೀಡಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಈ ಬಾರಿಯ ಬಜೆಟ್ನಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಟೀಕಿಸಿದ್ದಾರೆ.
ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿರುವ ತ್ರಿವೇಣಿ ಫ್ರೆಂಡ್ಸ್ ಸ್ಪೋರ್ಟ್ಸ್ ರಿಕ್ರಿಯೆಷನ್ ಕ್ಲಬ್ ನಲ್ಲಿ ನಿಯಮ ಬಾಹಿರವಾಗಿ ಇಸ್ಪೀಟ್ ದಂಧೆ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸರ್ಕಾರಿ ಆಸ್ತಿ ನಮ್ಮೆಲ್ಲರ ಆಸ್ತಿ ಎಂಬ ಸದಾಶಯದೊಂದಿಗೆ, ಇಲ್ಲಿನ ಸಾರಿಗೆ ಸಂಸ್ಥೆಯ ಬಸ್ಗಳಿಗೆ ಅಂಟಿಸಲಾಗಿದ್ದ ಅನಗತ್ಯ ಪೋಸ್ಟರ್ ಹಾಗೂ ಜಾಹೀರಾತು ಸ್ಟಿಕ್ಕರ್ಗಳನ್ನು ಸ್ಥಳೀಯ ಯುವಕರ ತಂಡವೊಂದು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮತ್ತು ವರುಣ ವಿಧಾನಸಭಾ ಕ್ಷೇತ್ರದಲ್ಲಿಯೇ ಸಾರ್ವಜನಿಕ ಶಿಕ್ಷಣ ಉಳಿಸಲು ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಎಐಡಿಎಸ್ಒ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದೆ.
ಮಾಘ ಹುಣ್ಣಿಮೆ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನೆಕ್ಕಿಲ ಗುಡ್ಡೆ ಮಾಲೇಮಾರ್ ಬಳಿ ಇರುವ ರೇಣುಕಾ ಯೆಲ್ಲಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮದ ಪ್ರಯುಕ್ತ ಕುಂಭ ಮೆರವಣಿಗೆಯನ್ನ ಮಂಗಳೂರು ದೇರೆಬೈಲ್ ರಾಮ ಮಂದಿರದಿಂದ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತ್ತು .
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದ್ದು ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಿದ್ದಾರೆ.
ದಕ್ಷಿಣ ಕಾಶಿ ಖ್ಯಾತಿಯ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 2,46,28,418 ರೂ ಕಾಣಿಕೆ ಸಂಗ್ರಹವಾಗಿದೆ.
ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ದೇಶದಲ್ಲಿ ತೆಂಗು ಉತ್ಪಾದನೆಯ ಸ್ಪರ್ಧಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ತೆಂಗು ಉತ್ತೇಜನ ಯೋಜನೆ ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.