Showing 20 of 21629 articles • Page 194 of 1082
ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ‘ಗರಿಗಳ ಭಾನುವಾರ ಹಬ್ಬ’ ಎಂದೇ ಪ್ರಸಿದ್ಧಿ ಪಡೆದಿರುವ ‘ಪಾಮ್ ಸಂಡೆ’ಯನ್ನು ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಶನಿವಾರ ಸಂಜೆ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫೈಓವರ್ ಮೇಲೆ ಮೀನಿನ ವ್ಯಾಪಾರಿ, ರೌಡಿ ಶೀಟರ್ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಹುಸೇನ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಹಲವು ಅಪರಾಧಗಳಲ್ಲಿ ಆರೋಪಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಜ್ಞಾವರ ಗ್ರಾಮದ ನಿವಾಸಿ ಎನ್.ಎಂ.ಅಜೀಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದ ಗಣೇಶ್ ಪ್ರಸಾದ್ (41) ಬಂಧಿತ ಆರೋಪಿ.
ನಿಟ್ಟೆ-ಎಂಆರ್ಪಿಎಲ್ ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026 ರ ಉದ್ಘಾಟನಾ ಸಮಾರಂಭವನ್ನು ಬಹಳ ಉತ್ಸಾಹದಿಂದ ನಡೆಸಲಾಯಿತು ಮತ್ತು ಇದನ್ನು ಔಪಚಾರಿಕವಾಗಿ ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಲಾಯಿತು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಗ್ರಾಮ ಪಂಚಾಯತಿ ಸ್ವಚ್ಛತಾಗಾರರ ದಿನಾಚರಣೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು.
ಮಾಜಿ ಸಚಿವ ಹಾಗೂ ಶಾಸಕನಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುವುದು ಹೊಸತೇನು ಅಲ್ಲ. ಆದರೆ ಬಂಟ್ವಾಳ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿರುವ ಹಕ್ಕು ಚ್ಯುತಿಯಿಂದ ನನಗೆ ನೋವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಯಮುನಾನಗರದಲ್ಲಿ ಸಿನಿಮೀಯ ಮಾದರಿಯ ಕಳ್ಳತನವೊಂದು ನಡೆದಿದೆ. ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ವಾಹನವೊಂದು ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ, ಬೈಕ್ನಲ್ಲಿ ಬಂದ ಕಳ್ಳನೊಬ್ಬ ಅತ್ಯಂತ ವೇಗವಾಗಿ ಮತ್ತು ಆತ್ಮವಿಶ್ವಾಸದಿಂದ ಸಿಲಿಂಡರ್ ಎಗರಿಸಿದ್ದಾನೆ.
ಐಪಿಎಲ್ 2026ರ ಕಹಳೆ ಮೊಳಗುವ ಹೊತ್ತಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಆಧಾರಸ್ತಂಭ, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಎಂ.ಎಸ್. ಧೋನಿ ಅವರು ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಕನಿಷ್ಠ ಎರಡು ವಾರಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ.
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್ ಅಹ್ಮದ್ ಬಂಧಿತ ಆರೋಪಿ. ಈತ ಶಿರೂರು ಗ್ರಾಮದ ಕೋಣಮಕ್ಕಿ ಎಂಬಲ್ಲಿ ಪಾತಿಮಾ ಎಂಬವರ ಮನೆಯಲ್ಲಿ ಕಳ್ಳತನ ಯತ್ನ ನಡೆಸಿದ್ದನು.
ನಿರ್ಭೀತ ಹಿಂದೂ ತಾಯಿಯ ಮೇಲೆ ಬಾಂಗ್ಲಾದೇಶದ ಇಸ್ಲಾಂವಾದಿಗಳಿಂದ ಕಲ್ಲೆಸೆದು ಹಲ್ಲೆ ಮಾಡಲಾಗಿದೆ. ತನ್ನ ಮುಗ್ಧ ಮಕ್ಕಳನ್ನು ಮತ್ತು ಮನೆಯನ್ನು ರಕ್ಷಿಸಲು ಅವಳು ಆಯುಧ ಹಿಡಿದು ಹೋರಾಡಿದ ದೃಶ್ಯ ಇದೀಗ ವೈರಲ್ ಆಗಿದೆ. ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ ನಂತರ ಈ ಘಟನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಈಶ್ವರನ ಹೂದೋಟ ಎಂದೇ ಬಣ್ಣಿಸಲಾಗುವ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಚ್ 30 ರಿಂದ ಏಪ್ರಿಲ್ 6 ವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.
ಇಂಡಿಗೋ ವಿಮಾನವು ಶನಿವಾರ ಬೆಳಿಗ್ಗೆ 161 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು, ಇದರಿಂದಾಗಿ ಅಧಿಕಾರಿಗಳು ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ನಡುವೆ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆಯೇ ನಾನಾ ಭಂಗಿಯಲ್ಲಿ ‘ಸರ್ಕಸ್’ ಮಾಡಿದ್ದ ಪುಂಡನ ವಿಡಿಯೋ ವೈರಲ್ ಆಗಿದ್ದು, ಇದೀಗ ವಿಡಿಯೋ ಪರಿಶೀಲಿಸಿದ ಕುಂದಾಪುರ ಸಂಚಾರ ಠಾಣೆ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಫೋಟೋ ತೆಗೆದುಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬರು ತಮ್ಮ ಹಿಜಾಬ್ ತೆಗೆದಿದ್ದಕ್ಕೆ, ಅವರ ಪತಿಯೇ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಮಾ.30 ರಂದು ನಡೆಯುವ ಐತಿಹಾಸಿಕ ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವದ ರಥೋತ್ಸವದ ವೇಳೆ ಡ್ರೋನ್ ಕ್ಯಾಮೆರಾಗಳ ಹಾರಾಟವನ್ನು ನಿಷೇಧಿಸಿ ಆದೇಶ ನೀಡಲಾಗಿದೆ.
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮಾ. 30 ರಂದು ನಡೆಯಲಿರುವ ಪುರಾಣ ಪ್ರಸಿದ್ಧ ಗೌತಮ ಪಂಚ ಮಹಾ ರಥೋತ್ಸವದ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆಗಳು ನಡೆದು ಅದರಲ್ಲೂ ಮುಖ್ಯವಾಗಿ ಪಂಚ ಮಹಾ ರಥಗಳನ್ನು ಕಟ್ಟುವ ಹಾಗೂ ಶೃಂಗರಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಪಾರ್ಸೆಲ್ ತಲುಪಿಸಲು ಚಲಿಸುವ ರೈಲಿನ ಪಕ್ಕದಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ, ವೀಡಿಯೊ ವೈರಲ್!