ತಮಿಳುನಾಡು : ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ – ಐ ಚಿತ್ರದ ಹಾಡಿಗೆ ರೆಹಮಾನ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಹಮಾನ್, ನನ್ನ ಪೊನ್ನಿಯಿನ್ ಸೆಲ್ವನ್ – ಐ ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನ ನೀಡಿರುವುದು ಗೌರವ ತಂದಿದೆ. ಈ ಮನ್ನಣೆಗಾಗಿ ತಮಿಳುನಾಡು ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ರೆಹಮಾನ್ ಪೋಸ್ಟ್ ಮಾಡಿದ್ದಾರೆ.

