Showing 20 of 21629 articles • Page 189 of 1082
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಚೈತ್ರ ಶುದ್ಧ ಹುಣ್ಣಿಮೆ ಅಂಗವಾಗಿ ಹನುಮಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಮೈಸೂರು ರೈಲ್ವೆ ವಿಭಾಗವು ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 449.13 ಕೋಟಿ ರೂಪಾಯಿಗಳ ಆದಾಯಗಳಿಸಿದೆ. ಅತಿ ಹೆಚ್ಚಿನ ಪ್ರಯಾಣಿಕ ಆದಾಯವನ್ನು ಗಳಿಸಿದ್ದು, ಹಿಂದಿನ ₹419.89 ಕೋಟಿ ದಾಖಲೆಯನ್ನು ಮೀರಿಸಿದೆ. ಟಿಕೆಟ್ ಪರಿಶೀಲನೆ ಮೂಲಕ ₹9.75 ಕೋಟಿ ಆದಾಯವನ್ನು ಗಳಿಸಿದ್ದು, ಇದು ಹಿಂದಿನ ದಾಖಲೆ ಮತ್ತು ವಾರ್ಷಿಕ ಗುರಿಯನ್ನೂ ಮೀರಿದೆ ಈ ಮೂಲಕ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ದಾಖಲೆಯ ಆದಾಯ ಮತ್ತು ವಾಣಿಜ್ಯ ವೃದ್ಧಿಯಾಗಿದೆ.
ಎಗ್ಗಿಲ್ಲದೆ ಮೈಸೂರಿನಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮೈಸೂರಿಗೆ ಬಂದು ಜೂಜಾಟ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಹಣ ಹಾಕಿ ಜೂಜಾಟವಾಡುವ ದೃಶ್ಯ ಲಭ್ಯವಾಗಿದೆ.
ಇಂದ್ರಾಳಿಯ ಇಂದ್ರಾಣಿ ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಸ್ಥಾನ ಸಮೀಪದಲ್ಲಿರುವ ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗ ದೇವರ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಎ. 3ರಿಂದ ಎ. 7ರ ವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಬುಧವಾರ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಬೆಂಜಮಿನ್ ಮೆಮೋರಿಯಲ್ ಸ್ಪೋರ್ಟ್ಸ್ ಫೌಂಡೇಶನ್ (BMFS) ವತಿಯಿಂದ ಆಯೋಜಿಸಲಾದ ಸಮರ್ ಕೋಚಿಂಗ್ ಕ್ಯಾಂಪ್ 2026 ಅನ್ನು ಸಂತ ಅಲೋಶಿಯಸ್ ಪಿಯು ಕಾಲೇಜು ಮೈದಾನದಲ್ಲಿ ಉದ್ಘಾಟಿಸಲಾಯಿತು. ಈ ಶಿಬಿರವು ಯುವ ಕ್ರೀಡಾಪಟುಗಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಮಹತ್ವದ ವೇದಿಕೆಯಾಗಲಿದೆ.
ದಕ್ಷಿಣಕಾಶಿ ನಂಜನಗೂಡಿನಲ್ಲಿ ಐತಿಹಾಸಿಕ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವವು ಬುಧವಾರ ರಾತ್ರಿ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.
ಏಪ್ರಿಲ್ 1 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ದಿನವಾಗಿದ್ದು, ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ಆರ್ಬಿಐ ಸ್ಥಾಪನೆಗೆ ನೀಡಿರುವ ಕೊಡುಗೆಗಳ ಸ್ಮರಣಾರ್ಥವಾಗಿ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಭಾಗಿತ್ವದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಎಂಬ ವಿಷಯದ ಬಗ್ಗೆ ನಂಜನಗೂಡು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೀನು ಹಿಡಿಯಲೆಂದು ಫಲ್ಗುಣಿ ನದಿಗೆ ಸಣ್ಣ ದೋಣಿಯಲ್ಲಿ ತೆರಳಿದ್ದ ಮೂವರು ಯುವಕರಲ್ಲಿ ಇಬ್ಬರು ನೀರುಪಾಲಾದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಕುಂಜತ್ಬೈಲಿನಲ್ಲಿ ನಡೆದಿದೆ.
ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನದಲ್ಲಿ ನಡೆದ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ಈ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಹಜವಾಗಿ ದನಗಳಿಗೆ ನಾಲ್ಕು ಕೆಚ್ಚಲುಗಳು ಇರುವುದೇ ಸಾಮಾನ್ಯ. ಆದರೆ ಉಡುಪಿ ಜಿಲ್ಲೆಯ ಪರ್ಕಳದ ಅಚ್ಯುತ ನಗರದಲ್ಲಿ ಅಪರೂಪದ ಐದು ಕೆಚ್ಚಲಿನ ದನವೊಂದು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಯಲ್ಲಿ ಮೊದಲ ಯಕೃತ್ತು (ಲಿವರ್) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ದೀರ್ಘಕಾಲದ ಯಕೃತ್ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಗೆ, ಮೃತ ದಾನಿ ಕಸಿ ಕಾರ್ಯಕ್ರಮದಡಿಯಲ್ಲಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಣಿಪಾಲ ಮಾಹೆಯ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಹೇಳಿದರು.
ತಾಲೂಕಿನ ರೇಷ್ಮೆರೋಡ್ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಏಕಾಏಕಿ ತೆರೆದುಕೊಂಡು ರಸ್ತೆಗೆ ಎಸೆಯಲ್ಪಟ್ಟಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಶಾಸಕ ಹರೀಶ್ ಪೂಂಜಾ ಅವರು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಹಬ್ ಎಂದೇ ಕರೆಯಲ್ಪಡುವ ಎಲೆಕ್ಟ್ರಾನಿಕ್ ಸಿಟಿ ಹಂತ 1 ರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದ ತೀವ್ರತೆಗೆ ಇಡೀ ಪ್ರದೇಶವೇ ದಟ್ಟವಾದ ಕಪ್ಪು ಹೊಗೆಯಿಂದ ಆವೃತವಾಗಿದೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೇರಳ ಸರ್ಕಾರದ ಕೆಎಸ್ಆರ್ಟಿಸಿ ಬಸ್ ಅತಿವೇಗದಿಂದ ನಿಯಂತ್ರಣ ತಪ್ಪಿ ಭೀಕರ ಅಪಘಾತ ಎಸಗಿದೆ.
ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿ ಬಿದ್ದ ಘಟನೆಯ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು ನದಿ ಪಾಲಾದ ದಾರುಣ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ (ಏ.1) ಮುಂಜಾನೆ ಸಂಭವಿಸಿದೆ. ಕುಂಜತ್ಬೈಲ್ ನಿವಾಸಿಗಳಾದ ಗಣೇಶ್ (28), ರಾಯಲ್ (24) ನೀರುಪಾಲಾದ ಯುವಕರು.
ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ಆಂಜನೇಯ ದೇವರ ಗುಡಿ ಹಾಗೂ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಇದೇ ಎ. 3ರಿಂದ 7ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ನೂತನ ಹೈ ಸ್ಪೀಡ್ 128- ಸ್ಲೈಸ್ ಸಿಟಿ ಸ್ಕ್ಯಾನ್ ಮತ್ತು ಅತ್ಯಾಧುನಿಕ ಮ್ಯಾಮೊಗ್ರಾಫಿಯನ್ನು ನವೀಕರಿಸಲಾದ ರೇಡಿಯೊಲಾಜಿ ವಿಭಾಗದಲ್ಲಿ ಉದ್ಘಾಟಿಸಲಾಯಿತು. ಮಣಿಪಾಲ್ ಅಕಾಡೆಮಿಯ ಉನ್ನತ ಶಿಕ್ಷಣದ ಫ್ರೊ. ಚ್ಯಾನ್ಸಲರ್ ಡಾ ಹೆಚ್ ಎಸ್ ಬಲ್ಲಾಳ್ ಏಪ್ರಿಲ್ 1 ರಂದು ಈ ನೂತನ ಸೇವೆಯನ್ನು ಉದ್ಘಾಟಿಸಿದರು.
ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಜಿಂಕೆ ಸಾವನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗೇಟ್ ಬಳಿ ನಡೆದಿದೆ.