ನವದೆಹಲಿ : ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಈ ಬಾರಿಯ ಆಯವ್ಯಯದಲ್ಲಿ ಆಯುರ್ವೇದ ಚಿಕಿತ್ಸೆಗೆ ಸಂಬಂಧಿಸಿ ಒತ್ತು ನೀಡಲಾಗಿದೆ. ಆರ್ಯುವೇದ ಚಿಕಿತ್ಸೆ ಉತ್ತೇಜನಕ್ಕೆ ದೇಶದಲ್ಲಿ 3 ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.

ಹೊಸ ಆಯುರ್ವೇದ ಆಸ್ಪತ್ರೆಗಳ ಘೋಷಣೆ ಮೂಲಕ ಔಷಧಿಗಳು, ಆಯುಷ್ ಫಾರ್ಮಸಿ ಉನ್ನತೀಕರಣಗೊಳಿಸುವ ಧ್ಯೇಯವನ್ನು ಕೇಂದ್ರ ಸರ್ಕಾರ ಗುರಿಹೊಂದಿದೆ. ಗುಜರಾತ್ ನ ಜಾಮನ್ನಗರದಲ್ಲಿ WHO ಕೇಂದ್ರ ನಿರ್ಮಾಣದ ಬಗ್ಗೆಯೂ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಇನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಬಜೆಟ್ ನಲ್ಲಿ ಪೈಲೆಟ್ ಸ್ಕೀಮ್ ನಡಿ 20 ಪ್ರವಾಸಿ ಸ್ಥಳಗಳಿಗೆ ಗೈಡ್‌ಗಳಿಗೆ ಕೇಂದ್ರದ ಸಹಕಾರ-ಪರ್ವತ ರೈಲುಗಳನ್ನು ಘೋಷಣೆ ಮಾಡಲಾಗಿದೆ.