Showing 20 of 20319 articles • Page 1014 of 1016
ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಹುಟ್ಟು ಹಬ್ಬದ ದಿನದಂದು ಮಠದ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಭಾರತದ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿಯವರ 33ನೇ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು.
‘ವಸಂತ ಬಂಗೇರ ಅವರು ಸದಾ ಬಡವರ ಪರ, ಸತ್ಯದ ಪರ ಇದ್ದರು. ಬಡವರ ಕೆಲಸ ಮಾಡಿಕೊಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು, ಒಂದು ವರ್ಷದ ಸಾಧನೆ ಶೂನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪವಿತ್ರತೆ ಉಳಿಸಲು ಈ ಬಾರಿ 20 ಗ್ರೇಸ್ ಅಂಕ ನೀಡಲಾಗಿದೆ. ಗ್ರೇಸ್ ಅಂಕ ನೀಡಿರುವುದು ಈ ವರ್ಷಕ್ಕೆ ಮಾತ್ರ. ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್ ಅಂಕ ಇರುವುದಿಲ್ಲ.
ರೈತನ ಮನೆಯ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಮನೆಯ ಛಾವಣಿ ಶೀಟ್ ಧ್ವಂಸಗೊಳಿಸಿ ಹೆಂಚುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಯಡಕುಮರಿ ಗ್ರಾಮದಲ್ಲಿ ನಡೆದಿದೆ.
ಬಿಜೆಪಿಯವರು ಬಜೆಟ್ ಓದುವುದಿಲ್ಲ ಅವರಿಗೆ ಅರ್ಥಶಾಸ್ತ್ರ ಗೊತ್ತಾಗುವುದಿಲ್ಲ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ. ಬಜಪೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ನಾವು ಏನೇನು ಕೆಲಸ ಕಾರ್ಯ ಮಾಡಿದ್ದೇವೆ ಎಂದು ಜನರಿಗೆ ತಿಳಿಸಿದ್ದೇವೆ ಎಂದರು
ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಅವರಿಗೆ ನಿಮ್ಮ ಬೆಲೆ ಎಷ್ಟು ಎಂದು ಪ್ರಶ್ನಿಸಿದ್ದ ಪಶ್ಚಿಮ ಬಂಗಾಳದ ತಮ್ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿದೆ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ತಿದೆ. ಈ ಪ್ರಕರಣದಲ್ಲಿ ಹೇಮಾ ಹೆಸರು ಕೇಳಿ ಬಂದಿತ್ತು.
ಲಂಡನ್ನಿಂದ ಬಂದ ಸಿಂಗಾಪುರ ಏರ್ಲೈನ್ಸ್ ವಿಮಾನದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ತೀವ್ರ ಪ್ರಕ್ಷುಬ್ಧತೆ ಉಂಟಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸ್ಥಳೀಯರು ಪ್ರವಾಸಿಗರು ಆಗಮಿಸಿ ಅಲ್ಲಲ್ಲಿ ನದಿ ತೀರದ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಹಾಗೂ ಬಿಯರ್ ಬಾಟಲಿಗಳನ್ನು ಹಾಕಿ ಪರಿಸರವನ್ನು ಹಾಳುಗೆಡವುತಿದ್ದಾರೆ.
ಆಟೋ ರಿಕ್ಷಾ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ಪ್ರಯಾಣಿಕ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾ| ಪಾಣೆಮಂಗಳೂರಲ್ಲಿ ನಡೆದಿದೆ.
ಪ್ರೀತಿಸಿದ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಬಿಸಿ ನೀರು ಎರಚಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸುಹೇಲ್ (27) ಎಂಬ ಯುವಕನ ಮೇಲೆ ಬಿಸಿ ನೀರು ಎರಚಲಾಗಿದೆ.
ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಯಾರೂ ಇಲ್ಲ ಎಂದು ಹೇಳುತ್ತಾರೆ. ಮನುಷ್ಯರೇ ಆಗಲಿ ಪ್ರಾಣಿ ಪಕ್ಷಿಗಳೇ ಆಗಲಿ, ತನ್ನ ಕಂದಮ್ಮನನ್ನು ರಕ್ಷಿಸಲು ತಾಯಿಯಾದವಳು ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ
ಯಾವುದೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದರೆ ರೂ.1,00,000 ವರೆಗೆ ವಿದ್ಯಾರ್ಥಿವೇತನ ನಿಮಗೆ ಸಿಗಲಿದೆ.
ದೇಶಿಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲಿಯೇ ಸ್ವಿಫ್ಟ್ ಸಿಎನ್ ಜಿ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದೆ.
ಉದ್ಯಮಿ ಗೋಪಿ ಥೋಟಾಕುರ ಬಾಹ್ಯಾಕಾಶ ತೆರಳಿದ ಮೊದಲ ಭಾರತೀಯರೆನಿಸಿಕೊಂಡರು. ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋ ಅವರ ʻಬ್ಲೂ ಆರಿಜಿನ್ನ ಎನ್ಎಸ್-25ʼ ಬಾಹ್ಯಾಕಾಶ
ಸಿಎಸ್ಕೆ ತಂಡಕ್ಕೆ ಸೋಲುಣಿಸಿ ಆರ್ಸಿಬಿ ತಂಡ ಪ್ಲೇಆಫ್ಗೆ ಪ್ರವೇಶಿಸಿದೆ. ಈ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಧೋನಿ ಆರ್ಸಿಬಿ ಆಟಗಾರರಿಗೆ ಹಸ್ತಲಾಘವ ನೀಡದೇ ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದರು.
ಬಾಯ್ಲರ್ ಸ್ಪೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದೆ.ಮೃತರನ್ನು ಶೋಭಾ ತೇಲಿ ಎಂದು ಗುರುತಿಸಲಾಗಿದೆ.
ಆರ್ಸಿಬಿ, ಸತತ ಸೋಲುಗಳಿಂದ ಪಾಠ ಕಲಿತು ತನ್ನ ಆವೇಗವನ್ನು ಹೆಚ್ಚಿಸಿಕೊಂಡು, ಆಕ್ರಮಣಕಾರಿ ಆಟವಾಡುವ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ.