Bengaluru 22°C
Ad

ಪದವಿ, ಪಿಜಿ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.1 ಲಕ್ಷವರೆಗೆ ವಿದ್ಯಾರ್ಥಿವೇತನ

ಯಾವುದೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದರೆ ರೂ.1,00,000 ವರೆಗೆ ವಿದ್ಯಾರ್ಥಿವೇತನ ನಿಮಗೆ ಸಿಗಲಿದೆ.

ಯಾವುದೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದರೆ ರೂ.1,00,000 ವರೆಗೆ ವಿದ್ಯಾರ್ಥಿವೇತನ ನಿಮಗೆ ಸಿಗಲಿದೆ.

ಎಲ್‌ಜಿ ಇಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ‘Life’s Good’ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ಅನ್ನು ಸಿಎಸ್‌ಆರ್‌ ಉಪಕ್ರಮವಾಗಿ ಜಾರಿಗೆ ತಂದಿದೆ.

ಈ ಸ್ಕಾಲರ್‌ಶಿಪ್‌ ಗೆ ಪ್ರಸ್ತುತ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಉದ್ದೇಶ ಒಂದು ವರ್ಷಕ್ಕೆ ಮಾತ್ರ ಶೈಕ್ಷಣಿಕ ಕಾರ್ಯಗಳಿಗೆ ಹಣಕಾಸು ನೆರವು ನೀಡುವುದಾಗಿದೆ. ಅರ್ಜಿ ಸಲ್ಲಿಸಲು ಅರ್ಹತೆಗಳೇನು, ಅರ್ಜಿಗೆ ಕೊನೆ ದಿನಾಂಕ ಯಾವಾಗ, ಅರ್ಜಿ ಹಾಕುವುದು ಹೇಗೆ, ಇತರೆ ಮಾಹಿತಿಗಳು ಹೀಗಿದೆ.

ಸ್ಕಾಲರ್‌ಶಿಪ್‌ ಹೆಸರು: ಲೈಫ್‌ ಗುಡ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್ 2024, ಸ್ಕಾಲರ್‌ಶಿಪ್‌ ಸೌಲಭ್ಯ : ಒಂದು ವರ್ಷದ ಅವಧಿಗೆ ರೂ.1,00,000 ವರೆಗೆ ಹಣಕಾಸು ನೆರವು ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23-05-2024 ಆಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು: ವಿದ್ಯಾರ್ಥಿಗಳು ಯಾವುದೇ ಪದವಿ, ಸ್ನಾತಕೋತ್ತರ ಪದವಿಗಳನ್ನು ಓದುತ್ತಿರಬೇಕು. ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ’ಯಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪಾಸ್‌ ಆಗಿರಬೇಕು. ಇತರೆ ವರ್ಷಗಳಲ್ಲಿ ಅಧ್ಯಯನ ಮಾಡುತ್ತಿರುವವರು ಹಿಂದಿನ ವರ್ಷದ ಶಿಕ್ಷಣದಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಲೈಫ್‌ ಗುಡ್‌ ಸ್ಕಾಲರ್‌ಶಿಪ್‌ ಅನ್ನು ಸಂಸ್ಥೆ ಕೆಲವು ಆಯ್ದ ಸಂಸ್ಥೆ / ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಿದೆ.

Buddy4study, ಎಲ್‌ಜಿ ಇಲೆಕ್ಟ್ರಾನಿಕ್ಸ್‌ ನ ಸಿಬ್ಬಂದಿ ಮಕ್ಕಳು ಅರ್ಜಿ ಹಾಕಲು ಅರ್ಹರಲ್ಲ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ದಾಟಿರಬಾರದು. ಅರ್ಜಿಯನ್ನು 4 ಹಂತಗಳಲ್ಲಿ ಸ್ವೀಕಾರ ಮಾಡಲಾಗುತ್ತದೆ. ಮೊದಲನೇ ಹಂತದ ಸ್ಕಾಲರ್‌ಶಿಪ್‌ಗೆ ಯಾವೆಲ್ಲ ಕಾಲೇಜು/ ಸಂಸ್ಥೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಚೆಕ್‌ ಮಾಡಲು ಕ್ಲಿಕ್ ಮಾಡಿ. ಮುಂದಿನ ಹಂತಗಳ ಅರ್ಜಿ ವಿವರಗಳಿಗಾಗಿ ಆಗಾಗ ಭೇಟಿ ನೀಡುತ್ತಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳು / ದಾಖಲೆಗಳು: ಆಧಾರ್ ಕಾರ್ಡ್, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ, ಪಿಜಿ ಪ್ರವೇಶದ ದಾಖಲೆ, ಆದಾಯ ಪ್ರಮಾಣಪತ್ರ,
ಬ್ಯಾಂಕ್‌ ಪಾಸ್‌ ಬುಕ್ ಜೆರಾಕ್ಸ್‌ ಪ್ರತಿ, ಪಾಸ್‌ಪೋರ್ಟ್‌ ಅಳತೆ ಭಾವಚಿತ್ರಗಳು.

ಅರ್ಜಿ ಹಾಕುವ ವಿಧಾನ: ‘ಲೈಫ್‌ ಗುಡ್ ಸ್ಕಾಲರ್‌ಶಿಪ್‌ ಪ್ರೋಗ್ರಾಮ್’ ಲಿಂಕ್ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ಮಾಹಿತಿಗಳನ್ನು ಒಮ್ಮೆ ಓದಿಕೊಳ್ಳಿ. ನಂತರ ಸ್ಕ್ರಾಲ್‌ಡೌನ್‌ ಮಾಡಿ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ. ಇಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ರಿಜಿಸ್ಟರ್ ಆಗಲು ಪಾಪಪ್ ವಿಂಡೋ ಓಪನ್ ಆಗುತ್ತದೆ. ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಬಹುದು.

Ad
Ad
Nk Channel Final 21 09 2023
Ad