ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಯಾರೂ ಇಲ್ಲ ಎಂದು ಹೇಳುತ್ತಾರೆ. ಮನುಷ್ಯರೇ ಆಗಲಿ ಪ್ರಾಣಿ ಪಕ್ಷಿಗಳೇ ಆಗಲಿ, ತನ್ನ ಕಂದಮ್ಮನನ್ನು ರಕ್ಷಿಸಲು ತಾಯಿಯಾದವಳು ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ. ಹೌದು. . ಹೀಗೆ ತಾಯಿಯ ಮಮತೆಯನ್ನು ತೋರುವ ವಿಡಿಯೋ ಒಂದು ವೈರಲ್ ಆಗಿದ್ದು, ಇನ್ನೇನೂ ತನ್ನ ಕಂದಮ್ಮ ಈ ಪ್ರಪಂಚಕ್ಕೆ ಕಾಲಿಡುತ್ತೇ ಎಂದು ಸಂತೋಷದಿಂದ ಕಾದು ಕುಳಿದಿದ್ದತಹ ಡೇಗೆ ಹಕ್ಕಿ ಯ ಮೊಟ್ಟೆಯನ್ನು ಕಾಗೆಯೊಂದು ತಿಂದು ಹಾಕುತ್ತದೆ. ಇದರಿಂದ ಕೋಪಗೊಂಡ ತಾಯಿ ಹಕ್ಕಿ ಕಾಗೆಯನ್ನೇ ಹೊಡೆದು ಸಾಯಿಸಿದೆ.

ಈ ಕುರಿತ ವಿಡಿಯೋವನ್ನು @Alphafox78 ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಡೇಗೆ ಹಕ್ಕಿಯೊಂದು ಮರದ ಪೊಟರೆಯಲ್ಲಿ ಮೊಟ್ಟೆಯನ್ನಿಟ್ಟು, ಆಹಾರವನ್ನರಸುತ್ತಾ ಆಚೆ ಕಡೆ ಹೋಗಿರುತ್ತೆ. ಇದೇ ವೇಳೆ ಪೊಟರೆಯೊಳಗೆ ನುಗ್ಗಿದ ಕಾಗೆಯೊಂದು ಮೂರು ಮೊಟ್ಟೆಗಳಲ್ಲಿ ಒಂದು ಮೊಟ್ಟೆಯನ್ನು ತಿಂದು ಹಾಕುತ್ತದೆ. ಡೇಗೆ ಹಕ್ಕಿ ವಾಪಸ್ ಬಂದು ನೋಡಿದಾಗ ಒಂದು ಮೊಟ್ಟೆ ಒಡೆದು ಹೋಗಿರುತ್ತದೆ.

ಯಾರೋ ನನ್ನ ಮೊಟ್ಟೆಯನ್ನು ತಿಂದು ಹಾಕಿದ್ದಾರೆ, ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಹೊಂಚು ಹಾಕಿ ಕುಳಿತಿದ್ದ ಈ ಹಕ್ಕಿ ಕಾಗೆ ಇನ್ನೊಂದು ಬಾರಿ ಪೊಟರೆಯೊಳಗೆ ಕಾಲಿಡುತ್ತಿದ್ದಂತೆ ಅದರ ಮೇಲೆ ದಾಳಿ ನಡೆಸಿ, ರೋಷದಿಂದ ಕಾಗೆಯನ್ನು ಹೊಡೆದು ಸಾಯಿಸುವಂತಹ ದೃಶ್ಯವನ್ನು ಕಾಣಬಹುದು.

— AlphaFox (@alphafox) May 20, 2024