Bengaluru 23°C
Ad

ಭಾರತದ ಮೊದಲ ʻಬಾಹ್ಯಾಕಾಶ ಪ್ರವಾಸಿʼ ಉದ್ಯಮಿ ಗೋಪಿ ಥೋಟಾಕುರ

ಉದ್ಯಮಿ ಗೋಪಿ ಥೋಟಾಕುರ ಬಾಹ್ಯಾಕಾಶ ತೆರಳಿದ ಮೊದಲ ಭಾರತೀಯರೆನಿಸಿಕೊಂಡರು. ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಝೋ ಅವರ ʻಬ್ಲೂ ಆರಿಜಿನ್‌ನ ಎನ್‌ಎಸ್‌-25ʼ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಆರು ಸದಸ್ಯರಲ್ಲಿ ಥೋಟಾಕುರ ಅವರೂ ಒಬ್ಬರೆನಿಸಿಕೊಂಡರು.

ಹ್ಯೂಸ್ಟನ್‌ : ಉದ್ಯಮಿ ಗೋಪಿ ಥೋಟಾಕುರ ಬಾಹ್ಯಾಕಾಶ ತೆರಳಿದ ಮೊದಲ ಭಾರತೀಯರೆನಿಸಿಕೊಂಡರು. ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಝೋ ಅವರ ʻಬ್ಲೂ ಆರಿಜಿನ್‌ನ ಎನ್‌ಎಸ್‌-25ʼ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಆರು ಸದಸ್ಯರಲ್ಲಿ ಥೋಟಾಕುರ ಅವರೂ ಒಬ್ಬರೆನಿಸಿಕೊಂಡರು.

Ad
300x250 2

ʻಬ್ಲೂ ಆರಿಜಿನ್‌ ಎನ್‌ಎಸ್‌-25 ಏಳನೇ ಬಾಹ್ಯಾಕಾಶ ವಿಮಾನವನ್ನು ಪಶ್ಚಿಮ ಟೆಕ್ಸಾಸ್‌ ಉಡ್ಡಯನ ಪ್ರದೇಶದಿಂದ ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಲಾಯಿತು ಎಂದು ಕಂಪೆನಿಯ ಸಾಮಜಿಕ ಮಾಧ್ಯಮದಲ್ಲಿ ತಿಳಿಸಿದೆ. ಭಾರತ ಸೇನೆಯ ವಿಂಗ್‌ ಕಮಾಂಡರ್‌ ಆಗಿದ್ದ ರಾಕೇಶ್‌ ಶರ್ಮ ಅವರು 1984ರಲ್ಲಿ ಬಾಹ್ಯಾಕಾಶ ಯಾನವನ್ನು ಕೈಗೊಂಡ ಮೊದಲಿಗರೆನಿಸಿಕೊಂಡಿದ್ದರು. ಆದರೆ, ಥೋಟಾಕುರ ಅವರು ಭಾರತದ ಮೊದಲ ಸ್ಪೇನ್‌ ಟೂರಿಸ್ಟ್‌ʼ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ad
Ad
Nk Channel Final 21 09 2023
Ad