Bengaluru 22°C
Ad

ಪಾನಿಪುರಿಯಲ್ಲಿ ಹಾನಿಕಾರಕ ಅಂಶ ಪತ್ತೆ : ನಿಷೇದಕ್ಕೆ ಇಂದು ಅಂತಿಮ ನಿರ್ಣಯ

ಪಾನಿಪುರಿ ಎಂದರೆ ಸಾಕು ಹಲವರ ಬಾಯಲ್ಲಿ ನೀರುರೂತ್ತದೆ. ಅದರ ಬಗ್ಗೆಯ ಅನಾರೋಗ್ಯದ ತಿಳಿದರೂ ಕೂಡ ಅದನ್ನು ತಿನ್ನುವವರ ಸಂಖ್ಯೆ ಕಡಿಮೆ ಏನು ಆಗಿಲ್ಲ.

ಪಾನಿಪುರಿ ಎಂದರೆ ಸಾಕು ಹಲವರ ಬಾಯಲ್ಲಿ ನೀರುರೂತ್ತದೆ. ಅದರ ಬಗ್ಗೆಯ ಅನಾರೋಗ್ಯದ ತಿಳಿದರೂ ಕೂಡ ಅದನ್ನು ತಿನ್ನುವವರ ಸಂಖ್ಯೆ ಕಡಿಮೆ ಏನು ಆಗಿಲ್ಲ. ಆದರೆ ಇದೀಗ ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಇಲಾಖೆ ಪರೀಕ್ಷೆ ಒಳಪಡಿಸಲಾದ ಪಾನಿಪುರಿ ಮಾದರಿಯ ವರದಿಯಲ್ಲಿ ಹಾನಿಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಸಿ ಅಸುರಕ್ಷಿತ ಪಾನಿಪೂರಿ ಮಾರಾಟವನ್ನು ನಿಷೇಧಿಸುವ ಸಾಧ್ಯತೆಗಳಿವೆ. ಪಾನಿಪೂರಿ ತಯಾರಿಗೆ ಬಳಸುವ ಸಾಸ್‌ ನಿಷೇಧಕ್ಕೆ ಒಳಪಡುವ ಸಾಧ್ಯತೆಯಂತೂ ದಟ್ಟವಾಗಿದೆ.

Ad
300x250 2

ಆಹಾರ ಮತ್ತು ಸುರಕ್ಷೆ ಗುಣಮಟ್ಟ ಇಲಾಖೆ ರಾಜ್ಯಾದ್ಯಂತ 78 ಪಾನಿಪುರಿಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಅವುಗಳಲ್ಲಿ 18 ಮಾದರಿಗಳು ಮನುಷ್ಯರು ಸೇವಿಸಲು ಅಯೋಗ್ಯ ಎಂಬ ವರದಿ ಇಲಾಖೆಯ ಅಧಿಕಾರಿಗಳ ಕೈ ಸೇರಿಸಿದೆ. ಹೀಗಾಗಿ ಈ ಸಂಬಂಧ ಸೋಮವಾರ ನಡೆಸುವ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad