Ad

ನಡು ಬೀದಿಯಲ್ಲೇ ಮಹಿಳೆಯ ಕೂದಲು ಹಿಡಿದು ನಿರ್ದಯವಾಗಿ ಥಳಿತ

ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬಳಿಗೆ ನಡುರಸ್ತೆಯಲ್ಲೆ ಅಮಾನವೀಯವಾಗಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಪುರುಷನೊಬ್ಬ ಮಹಿಳೆ ಮತ್ತು ಇನ್ನೊಬ್ಬ ಪುರುಷನನ್ನು ಕೋಲುಗಳಿಂದ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಪಶ್ಚಿಮ ಬಂಗಾಳ:   ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬಳಿಗೆ ನಡುರಸ್ತೆಯಲ್ಲೆ ಅಮಾನವೀಯವಾಗಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಪುರುಷನೊಬ್ಬ ಮಹಿಳೆ ಮತ್ತು ಇನ್ನೊಬ್ಬ ಪುರುಷನನ್ನು ಕೋಲುಗಳಿಂದ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Ad
300x250 2

ಥಳಿಸಿದ ವ್ಯಕ್ತಿ ಮಹಿಳೆಯ ತಲೆ ಕೂದಲಿಗೆ ಕೈ ಹಾಕಿ ಬದಿಗೆ ಎಳೆದೊಯ್ದಿದ್ದಾನೆ.ಸುತ್ತಲಿದ್ದ ನೂರಾರು ಜನರು ಮೂಕಪ್ರೇಕ್ಷಕರಾಗಿ ನಿಂತಿದ್ದರು. ಈ ನಿರ್ಧಯ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದ ಲಕ್ಷ್ಮೀಕಾಂತಪುರದಲ್ಲಿ ನಡೆದಿದೆ ಎಂದು ಹೇಳಲಾಗಿದೆ ವೈರಲ್ ದೃಶ್ಯಗಳಲ್ಲಿ, ‘ಜೆಸಿಬಿ’ ಎಂದು ಕರೆಯಲ್ಪಡುವ ತಾಜೆಮುಲ್ ಎಂಬ ವ್ಯಕ್ತಿ ಮಹಿಳೆ ಮತ್ತು ಪುರುಷನನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸುತ್ತಿದ್ದಾನೆ.

ತಾಜೆಮುಲ್ ಚೋಪ್ರಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ಹಮೀದುರ್ ರೆಹಮಾನ್ ಅವರ ನಿಕಟವರ್ತಿ ಎನ್ನಲಾಗಿದ್ದು ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸದ್ಯ ವಿಡಿಯೋ ಮಾಡಿದ ವ್ಯಕ್ತಿಯನ್ನು ತನ್ನ ಮನೆಯಿಂದ ಹೊರಹಾಕಲಾಗಿದೆ ಎಂದು ಸಲೀಂ ಆರೋಪಿಸಿದ್ದಾರೆ. “ಮಹಿಳೆಯ ಮೇಲೆ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವ ಜೆಸಿಬಿ ಅಕಾ ತಾಜೆಮುಲ್ ಎನ್ನುವವನು ಮನ್ಸೂರ್ ಆಲಂನ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆಗಾರರು ನಿರಾಳವಾಗಿದ್ದಾರೆ, ಬಂಗಾಳದಲ್ಲಿ ನ್ಯಾಯದ ವಿಡಂಬನೆ ಮುಂದುವರೆದಿದೆ” ಎಂದು ಬರೆದಿದ್ದಾರೆ.

https://x.com/amitmalviya/status/1807341290520289486

Ad
Ad
Nk Channel Final 21 09 2023
Ad