Bengaluru 22°C
Ad

ಮಹಿಳಾ ಶೌಚಾಲಯಗಳಲ್ಲಿ ಟೈಮರ್ ಅಳವಡಿಕೆ; ಕಾರಣವೇನು ಗೊತ್ತ?

Timer

ಚೀನಾದ ಸಾರ್ವಜನಿಕ ಶೌಚಾಲಯಗಳಲ್ಲಿ ಟೈಮರ್​ಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರು ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಚೀನಾ ಪ್ರವಾಸಿ ತಾಣಕ್ಕೆ ಯುನೆಸ್ಕೋ ಮಾನ್ಯತೆ ಪಡೆದ ಪ್ರಸಿದ್ಧ ಪರಂಪರೆಯಿದೆ, ಇಲ್ಲಿನ ಶೌಚಾಲಯಗಳಿಗೆ ಟೈಮರ್‌ಗಳನ್ನು ಅಳವಡಿಸಲಾಗಿದ್ದು, ಜನರು ಎಷ್ಟು ಸಮಯ ಒಳಗೆ ಇದ್ದಾರೆ ಎಂಬುದನ್ನು ತಿಳಿಸುತ್ತದೆ. ಅದನ್ನು ತೆಗೆಯಬೇಕು ಎನ್ನುವ ಬೇಡಿಕೆಯೂ ಬಂದಿದೆ.

Ad
300x250 2

ಅನೇಕ ಬಾರಿ ಪ್ರವಾಸಿಗರು ಸ್ನಾನಗೃಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಬಾತ್ರೂಮ್ ಒಳಗೆ ಅವರಿಗೆ ಏನಾದರೂ ಸಂಭವಿಸಿದಲ್ಲಿ, ಅಥವಾ ತುರ್ತು ಪರಿಸ್ಥಿತಿ ಉದ್ಭವಿಸಿದರೆ, ಅಂತಹ ಸಂದರ್ಭದಲ್ಲಿ ಅವರನ್ನು ಉಳಿಸಬಹುದು. ಅವರ ಸುರಕ್ಷತೆಗಾಗಿ ಈ ಟೈಮರ್ ಅನ್ನು ಸ್ಥಾಪಿಸಲಾಗಿದೆ.

ಈ ಟೈಮರ್‌ಗಳು ಬಾತ್‌ರೂಮ್ ಬಳಸುವ ಸಮಯವನ್ನು ನಿರ್ಧರಿಸುವುದಿಲ್ಲ, ಯಾರು ಬೇಕಾದರೂ ಸಮಯ ತೆಗೆದುಕೊಳ್ಳಬಹುದು, ಎಷ್ಟು ಸಮಯದವರೆಗೆ ಬಾಗಿಲು ಮುಚ್ಚಲಾಗಿದೆ ಎಂಬುದನ್ನು ಮಾತ್ರ ತೋರಿಸುತ್ತೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಹೊರಗೆ ಇರುವ ಜನರು ಅನಗತ್ಯವಾಗಿ ಬಾಗಿಲು ಬಡಿಯುವ ಅಗತ್ಯವಿಲ್ಲ. ಸಮಯ ಮಿತಿಯನ್ನು ಮೀರಿದರೆ ಯಾರನ್ನೂ ಸ್ನಾನಗೃಹದಿಂದ ಹೊರಗೆ ಕಳುಹಿಸುವುದಿಲ್ಲ. ಬರುವ ಪ್ರವಾಸಿಗರು ತಮ್ಮ ಖಾಸಗಿತನಕ್ಕೆ ಧಕ್ಕೆಯಾದಂತೆ ಅನಿಸುತ್ತದೆ ಎನ್ನುತ್ತಾರೆ ಎಂದು ಸಿಬ್ಬಂದಿ ಹೇಳಿದ್ದಾರೆ.

Ad
Ad
Nk Channel Final 21 09 2023
Ad