Bengaluru 22°C
Ad

ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿತ್ತು ಹೆಬ್ಬೆರಳು

ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್ ನಲ್ಲಿ ಮಾನವನ ಬೆರಳೊಂದು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಿಂದ ವರದಿಯಾಗಿದೆ.

ಮುಂಬಯಿ: ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್ ನಲ್ಲಿ ಮಾನವನ ಬೆರಳೊಂದು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಿಂದ ವರದಿಯಾಗಿದೆ.

Ad
300x250 2

ಮಲಾಡ್‌ನ ಉಪನಗರದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಕೋನ್ ಐಸ್‌ಕ್ರೀಮ್ ಅನ್ನು ಆರ್ಡರ್ ಮಾಡಿದ್ದರು. ನಂತರ ಡೆಲಿವರಿ ಬಾಯ್‌ ಐಸಕ್ರೀಂ ಬಾಕ್ಸ್‌ ತಂದುಕೊಟ್ಟಿದ್ದಾನೆ. ಇನ್ನೇನು ಐಸ್ಕ್ರೀಂನ್ನು ತಿನ್ನಬೇಕೆನ್ನುವಷ್ಟರಲ್ಲಿ ಐಸ್ಕ್ರೀಂನಲ್ಲಿ ವಿಚಿತ್ರ ವಸ್ತು ಕಂಡಿದೆ. ಮೊದಲಿಗೆ ವಾಲ್‌ನಟ್‌ ಇರಬಹುದು ಎಂದು ತಿನ್ನಲು ಮುಂದಾಗಿದ್ದಾರೆ ಆದರೆ ಅವರು ವೈದ್ಯೆಯಾಗಿರುವ ಕಾರಣ ಇದು ಹೆಬ್ಬರಳಿನ ಭಾಗ ಎಂಬುದುದನ್ನು ಅರ್ಥಮಾಡಿಕೊಂಡಿದ್ದಾರೆ. ನಂತರ ಉಗುಳಿ ನೋಡಿದಾಗ ಮನುಷ್ಯನ ಹೆಬ್ಬೆರಳು! ಅದನ್ನು ಕಂಟ ಮಹಿಳೆ ದಿಗ್ಮ್ರಮೆಕೊಂಡಿದ್ದಾರೆ.

ಅಲ್ಲದೆ ತನ್ನ ಮೊಬೈಲ್ ನಲ್ಲಿ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಳಿಕ ಐಸ್ ಕ್ರೀಮ್ ಹಿಡಿದುಕೊಂಡು ಮಲಾಡ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಮಹಿಳೆಯ ದೂರು ಆಧರಿಸಿ ಮಲಾಡ್ ಪೊಲೀಸರು ಮುಂಬೈ ಯಮ್ಮೋ ಐಸ್ ಕ್ರೀಮ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad