News Karnataka Kannada
Monday, May 06 2024
ಮಂಗಳೂರು

ಸುರತ್ಕಲ್ ಬೀಚ್​ನಲ್ಲಿ ಅಪರೂಪದ ‘ಸ್ಪಾಟೆಡ್ ಮೊರೈ ಈಲ್ಸ್’ ಮೀನು ಪತ್ತೆ

fish
Photo Credit :

ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್​ನಲ್ಲಿ ಅಪರೂಪದ ಮೀನು ಪತ್ತೆಯಾಗಿದೆ. ಸ್ಪಾಟೆಡ್ ಮೊರೈ ಈಲ್ಸ್ ಹೆಸರಿನ ಅಪರೂಪದ ಮೀನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿ ಕಾಣುವ ಈ ಮೀನು, ದ್ವೀಪದ ಬಳಿಯ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಬ್ಬರದಿಂದ ತೀರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ತುಳುವಿನಲ್ಲಿ ಈ ಮೀನುನನ್ನು ಮರಂಚಾ ಮೀನು ಎಂದು ಕರೆಯುತ್ತಾರೆ. ಕಲ್ಲು ಇರುವ ಪ್ರದೇಶದಲ್ಲಿ ಈ ಮೀನು ಗಾಳಕ್ಕೆ ಅಪರೂಪಕ್ಕೆ ಸಿಗುತ್ತದೆ. ಇದರ ಹಲ್ಲು ಹರಿತವಾಗಿರುತ್ತದೆ. ಇದನ್ನು ಸ್ಥಳೀಯರು ತಿನ್ನುವುದಿಲ್ಲ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು