News Karnataka Kannada
Sunday, May 19 2024
ಗುಜರಾತ್

ಮತದಾನಕ್ಕೂ ಮುನ್ನ ದಿನವೇ ಅಹಮದಾಬಾದ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ

ಗುಜರಾತ್‌ನಲ್ಲಿ ನಾಳೆ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಅಹಮದಾಬಾದ್‌ನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದಿ.
Photo Credit : NewsKarnataka

ಅಹಮದಾಬಾದ್ : ಗುಜರಾತ್‌ನಲ್ಲಿ ನಾಳೆ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಅಹಮದಾಬಾದ್‌ನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದಿ.

ಮಾಹಿತಿಯ ಪ್ರಕಾರ, ಅಹಮದಾಬಾದ್‌ನ ಶಾಲೆಗಳಿಗೆ ಬೆದರಿಕೆ ಮೇಲ್‌ಗಳು ಬರುತ್ತಿವೆ. ಹಾಗಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಮತ್ತು ಶಾಲೆಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನು ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ಆಗಮಿಸಿದೆ.

ಇದರಲ್ಲಿ ಘಟ್ಲೋಡಿಯಾದ ಆನಂದ್ ನಿಕೇತನ್ ಮತ್ತು ಚಾಂದ್ಖೇಡಾದ ಕೇಂದ್ರೀಯ ವಿದ್ಯಾಲಯ ಮತ್ತು ಸ್ಟ್ರಾಪುರ್‌ನ ಏಷ್ಯಾ ಸ್ಕೂಲ್ ಎಂಬ ಎರಡು ಶಾಲೆಗಳ ಹೆಸರುಗಳು ಬಂದಿವೆ. ಇದಲ್ಲದೇ ಇನ್ನೂ ಹಲವು ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದ್ದು, ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು