ಪುಣೆ: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ತಾಗಿದ ಪರಿಣಾಮ 11 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪುಣೆಯಲ್ಲಿ ನಡೆದಿರುವುದು ವರದಿಯಾಗಿದೆ.
ಶೌರ್ಯ ಮೃತ ಬಾಲಕ. ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್ ಆಡುತ್ತಿದ್ದ. ಬೌಲಿಂಗ್ ಮಾಡುತ್ತಿದ್ದ ಶೌರ್ಯ ಅವರ ಎಸೆತಕ್ಕೆ ಬ್ಯಾಟ್ಸ್ ಮನ್ ಬಲವಾಗಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಚೆಂಡು ನೇರವಾಗಿ ಶೌರ್ಯ ಅವರ ಖಾಸಗಿ ಅಂಗಕ್ಕೆ ಬಂದು ತಾಗಿದೆ. ಚೆಂಡು ಬಲವಾಗಿ ಬಿದ್ದ ಪರಿಣಾಮ ಶೌರ್ಯ ನೋವಿನಲ್ಲಿ ಎರಡು ಹೆಜ್ಜೆ ಇಡುತ್ತಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಆತನ ಸ್ನೇಹಿತರು, ಶೌರ್ಯನನ್ನು ಉಪಚರಿಸಿ, ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ ಶೌರ್ಯ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಪರೀಕ್ಷಿಸಿ ಆದಾಗಲೇ ಬಾಲಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಆಘಾತಕಾರಿ ಘಟನೆಯ ವಿಡಿಯೋ ಸಿಸಿಟವಿಯಲ್ಲಿ ಸೆರೆಯಾಗಿದೆ.
An 11-year-old boy died after a ball hit his private part while he was playing cricket with his friends in Pune. The incident was caught on CCTV camera.#LokmatTimes #PuneIncident #TragicIncident #Cricket pic.twitter.com/FS5hHHwNxU
— Lokmat Times (@lokmattimeseng) May 6, 2024