Bengaluru 22°C
Ad

ಚಾಮರಾಜನಗರ: ಅನರ್ಹರಿಗೆ ಪಿಂಚಣಿ ನೀಡಿದ ಉಪತಹಶೀಲ್ದಾರ್ ಅಮಾನತು

ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಹೋಬಳಿ ವ್ಯಾಪ್ತಿಯಲ್ಲಿ ಅನರ್ಹರಿಗೆ ಸಾಮಾಜಿಕ ಪಿಂಚಣಿ ಮಂಜೂರು ಮಾಡಿ, ಸರ್ಕಾರಕ್ಕೆಆರ್ಥಿಕ ನಷ್ಟ ಉಂಟು ಮಾಡಿರುವ ಪ್ರಕರಣ.

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಹೋಬಳಿ ವ್ಯಾಪ್ತಿಯಲ್ಲಿ ಅನರ್ಹರಿಗೆ ಸಾಮಾಜಿಕ ಪಿಂಚಣಿ ಮಂಜೂರು ಮಾಡಿ, ಸರ್ಕಾರಕ್ಕೆಆರ್ಥಿಕ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ಅಗರ- ಮಾಂಬಳ್ಳಿ ನಾಡ ಕಚೇರಿಯ  ಉಪತಹಶೀಲ್ದಾರ್ ಪುಷ್ಪವತಿಯನ್ನು ಅಮಾನತುಗೊಳಿಸುವಂತೆ ಮೈಸೂರು ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಆದೇಶಿದ್ದಾರೆ.

Ad
300x250 2

ಹೋಬಳಿ ವ್ಯಾಪ್ತಿಯಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣಪತ್ರಗಳನ್ನು ಸಲ್ಲಿಸಿ ವಿವಿಧ ಅನರ್ಹರಿಗೆ ಪಿಂಚಣಿಯನ್ನು  ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದಕ್ಕೆ ತನಿಖಾ ತಂಡ ನೇಮಿಸಿದ ಜಿಲ್ಲಾಧಿಕಾರಿಗಳು ವರದಿ ಪಡೆದುಕೊಂಡಿದ್ದರು. ಈ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ರಾಜಸ್ವ ನಿರೀಕ್ಷಕರು, ಮತ್ತು ನಾಲ್ವರು ಗ್ರಾಮ ಆಡಳಿತಾಧಿಕಾರಿಗಳನ್ನು ಅಮಾನತು ಮಾಡಿದ್ದರು.

ಇದೀಗ  ಉಪತಹಶೀಲ್ದಾರ್ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಇವರನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದ್ದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ. ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಒಟ್ಟು 78 ಕಡತಗಳ್ನು ಪರಿಶೀಲಿಸಿ ಇದರಲ್ಲಿ 73 ಅರ್ಜಿಗಳಲ್ಲಿ ವಯಸ್ಸಿಗೆ  ಸಂಬಂಧಿಸಿದಂತೆ ವೈದ್ಯರ ದೃಢೀರಕಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ದಾಖಲೆಗಳಲ್ಲಿ ಆಯ್ಕೆಗೊಂಡ ವಯಸ್ಸಿಗಿಂತಲೂ ಕಡಿಮೆ ಇದ್ದದ್ದು ಕಂಡು ಬಂದಿತ್ತು.

ಅಗರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ನೀಡಿರುವ ನಕಲಿ ಸಾಮಾಜಿಕ ಪಿಂಚಣಿಯಿಂದ ಒಟ್ಟು  ಸರ್ಕಾರಕ್ಕೆ  2,53,200 ರೂ.ಗಳ ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿ ನೀಡಲಾಗಿತ್ತು. ಆದರೆ ಇದಕ್ಕೆ ಇವರು ನೀಡಿರುವ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಇವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

Ad
Ad
Nk Channel Final 21 09 2023
Ad