Bengaluru 23°C
Ad

ಜಮೀನಿನಲ್ಲಿ ಜಿಂಕೆ ಮೇಲೆರಗಿದ ವ್ಯಾಘ್ರ : ಬೆಚ್ಚಿಬಿದ್ದ ಸ್ಥಳೀಯರು

ತಾಲೂಕಿನ ಪಡಗೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಜಿಂಕೆಯನ್ನ ಅಟ್ಟಿಸಿಕೊಂಡು ಹೋದ ಹುಲಿಯನ್ನ ಕಂಡ ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಜಮೀನಿನಲ್ಲಿ ಹಠಾತ್ ಜಿಂಕೆ ಮೇಲೆ ಎರಗಿದ ಹುಲಿ ಕಂಡು ಬೆಚ್ಚಿಬಿದ್ದಿದ್ದಾರೆ.

ಗುಂಡ್ಲುಪೇಟೆ: ತಾಲೂಕಿನ ಪಡಗೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಜಿಂಕೆಯನ್ನ ಅಟ್ಟಿಸಿಕೊಂಡು ಹೋದ ಹುಲಿಯನ್ನ ಕಂಡ ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಜಮೀನಿನಲ್ಲಿ ಹಠಾತ್ ಜಿಂಕೆ ಮೇಲೆ ಎರಗಿದ ಹುಲಿ ಕಂಡು ಬೆಚ್ಚಿಬಿದ್ದಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಹುಲಿಯನ್ನ ಕಂಡ ಸ್ಥಳೀಯರು ಕೂಗಿಕೊಂಡಾಗ ಜಿಂಕೆಯನ್ನ ಅಲ್ಲೇ ಬಿಟ್ಟು ಪರಾರಿಯಾಗಿದೆ. ಹುಲಿ ದಾಳಿಗೆ ಸಿಲುಕಿ ಕೆಲಕಾಲ ನರಳಾಡಿದ ಜಿಂಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಹುಲಿ ದಾಳಿಗೆ ಸಿಲುಕಿದ್ದನ್ನ ಕಣ್ಣಾರೆ ಕಂಡ ಸ್ಥಳೀಯರು ಜಿಂಕೆಯ ದೃಶ್ಯವನ್ನ ಸೆರೆಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆ ಹುಲಿಗಳ ಕಾಟದಿಂದ ಬೇಸತ್ತಿರುವ ಗ್ರಾಮಸ್ಥರು ವನ್ಯ ಮೃಗಗಳನ್ನ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Ad
Ad
Nk Channel Final 21 09 2023
Ad