Bengaluru 23°C
Ad

ಜೈಲಿಂದಲೇ ಗೆದ್ದ ‘ಉಗ್ರ’ ಆರೋಪಿ : ಪ್ರಚಾರಕ್ಕೆ ಕೇವಲ 27,000 ರೂ ವೆಚ್ಚ ಎಂದ ಮಗ

ಜಮ್ಮು ಮತ್ತು ಕಾಶ್ಮೀರದಲ್ಲೂ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಐದು ಸ್ಥಾನಗಳ ಪೈಕಿ ಬಿಜೆಪಿ ಎರಡು, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್) ಪಕ್ಷಗಳಿಗೆ ತಲಾ ಎರಡು ಸ್ಥಾನ ಸಿಕ್ಕಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಜಯಿಸಿದ್ದಾರೆ. ಈ ಪಕ್ಷೇತರ ಅಭ್ಯರ್ಥಿಯೇ ಶೇಖ್ ಅಬ್ದುಲ್ ರಷೀದ್.

ಶ್ರೀನಗರ್ : ಜಮ್ಮು ಮತ್ತು ಕಾಶ್ಮೀರದಲ್ಲೂ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಐದು ಸ್ಥಾನಗಳ ಪೈಕಿ ಬಿಜೆಪಿ ಎರಡು, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್) ಪಕ್ಷಗಳಿಗೆ ತಲಾ ಎರಡು ಸ್ಥಾನ ಸಿಕ್ಕಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಜಯಿಸಿದ್ದಾರೆ. ಈ ಪಕ್ಷೇತರ ಅಭ್ಯರ್ಥಿಯೇ ಶೇಖ್ ಅಬ್ದುಲ್ ರಷೀದ್.

Ad
300x250 2

ಅದರಲ್ಲೂ ಅವರ ವಿರುದ್ಧ ಇದ್ದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನೇ ಸೋಲಿಸಿದ್ದಾರೆ. ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ವಿರುದ್ಧ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಿಸಿದ್ದಾರೆ. ಜಮ್ಮು ಕಾಶ್ಮೀರ್ ಪೀಪಲ್ ಕಾನ್ಫರೆನ್ಸ್ ಪಕ್ಷದಿಂದ ಸಾಜದ್ ಗಾನಿ ಲೋನೆ ಕೂಡ ಕಣದಲ್ಲಿದ್ದರು. ಅವರು ಮೂರನೇ ಸ್ಥಾನ ಪಡೆದಿದ್ದಾರೆ.

ಎಂಜಿನಿಯರ್ ರಷೀದ್ ಎಂದು ಹೆಸರಾಗಿರುವ ಶೇಖ್ ಅಬ್ದುಲ್ ರಷೀದ್ ಕಳೆದ ಐದು ವರ್ಷದಿಂದಲೂ ತಿಹಾರ್ ಜೈಲಿನಲ್ಲಿದ್ದಾರೆ. ಭಯೋತ್ಪಾದನೆಗೆ ಫಂಡಿಂಗ್ ವ್ಯವಸ್ಥೆ ಮಾಡಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಅವರು ಜೈಲಿನಲ್ಲಿದ್ದರೂ ಬಾರಾಮುಲ್ಲಾ ಕ್ಷೇತ್ರದಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

Ad
Ad
Nk Channel Final 21 09 2023
Ad