Bengaluru 22°C
Ad

ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕುತೂಹಲ ಕೂಡ ಹೆಚ್ಚಿತ್ತು. , ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ವಾರಾಣಸಿ : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕುತೂಹಲ ಕೂಡ ಹೆಚ್ಚಿತ್ತು. , ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಅಜಯ್ ರೈ, ಬಿಎಸ್​​ಪಿಯಿಂದ ಅಥರ್ ಜಮಾಲ್ ಲಾರಿ ಸ್ಪರ್ಧಿಸಿದ್ದಾರೆ.ಮೋದಿಗೆ 6,12,970 ಮತ, ಅಜಯ್ ರೈಗೆ 4,60,457 ಮತಗಳು ಲಭಿಸಿವೆ.

ಪ್ರಧಾನಿ ಮೋದಿ 2014ರ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ವಾರಾಣಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಭಾರಿ ಅಂತರದಿಂದ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ದೇಶದ ಪ್ರಧಾನಿಯಾದರು. ವಾರಾಣಸಿ ನಗರವನ್ನು ‘ದೇವಾಲಯಗಳ ನಗರ’, ‘ದೇಶದ ಧಾರ್ಮಿಕ ರಾಜಧಾನಿ’, ‘ದೀಪಗಳ ನಗರ’, ‘ಶಿವನ ನಗರ’, ‘ಜ್ಞಾನದ ನಗರ’ ಎಂಬಿತ್ಯಾದಿ ಹೆಸರುಗಳಿಂದ ಸಂಬೋಧಿಸಲಾಗುತ್ತಿದೆ.

Ad
Ad
Nk Channel Final 21 09 2023
Ad