Showing 20 of 605 posts • Page 5 of 31
ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತೊಂದು ಮಹತ್ವದ ಜಾಗತಿಕ ಸಾಧನೆ ಮಾಡಿದ್ದು, ಅದರ ಸಹ ಸಂಸ್ಥೆ ಕಾಲೇಜ್ ಆಫ್ ಫಾರ್ಮಸಿ, ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಗ್ಸ್ ಬೈ ಸಬ್ಜೆಕ್ಟ್ 2026ರಲ್ಲಿ ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಭಾಗದಲ್ಲಿ ವಿಶ್ವದ 351–400 ಸ್ಥಾನಗಳ ಬ್ಯಾಂಡ್ನಲ್ಲಿ ಸ್ಥಾನ ಪಡೆದಿದೆ.
ಬೆಂಜಮಿನ್ ಮೆಮೋರಿಯಲ್ ಸ್ಪೋರ್ಟ್ಸ್ ಫೌಂಡೇಶನ್ (BMFS) ವತಿಯಿಂದ ಆಯೋಜಿಸಲಾದ ಸಮರ್ ಕೋಚಿಂಗ್ ಕ್ಯಾಂಪ್ 2026 ಅನ್ನು ಸಂತ ಅಲೋಶಿಯಸ್ ಪಿಯು ಕಾಲೇಜು ಮೈದಾನದಲ್ಲಿ ಉದ್ಘಾಟಿಸಲಾಯಿತು. ಈ ಶಿಬಿರವು ಯುವ ಕ್ರೀಡಾಪಟುಗಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಮಹತ್ವದ ವೇದಿಕೆಯಾಗಲಿದೆ.
ತಜ್ಞರಿಂದ ಜ್ಞಾನವನ್ನು ಪಡೆದುಕೊಳ್ಳುವ ವಿನೂತನ ಜಾಗತಿಕ ಕಾರ್ಯಕ್ರಮವಾದ ಟೆಡ್ ಎಕ್ಸ್ ಒಡಿಶಾದ ಭುವನೇಶ್ವರದಲ್ಲಿರುವ ಪ್ರತಿಷ್ಠಿತ ಕಳಿಂಗ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರಗಿದ್ದು ಜಾದೂಗಾರ ಕುದ್ರೋಳಿ ಗಣೇಶ್ ರವರು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ಏಳನೇ ತರಗತಿಯ ವಿದ್ಯಾರ್ಥಿನಿ ಅನನ್ಯ ಬಿ. ಅವರು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಗಾಗಿ ಕೊಡಮಾಡುವ ‘ಇನ್ಸ್ಫಯರ್ ಅವಾರ್ಡ್ ಮಾನಕ್’ 2025-26 ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮನು ನಮಗೆ ಆದರ್ಶ ವ್ಯಕ್ತಿ. ರಾಮನಂತೆ ನಡೆಯಲು ಅವನ ಗುಣಗಳನ್ನು ಅಳವಡಿಸಿಕೊಳ್ಳಬೇಕು.
ಎರಡು ದಿನಗಳ ನಿಟ್ಟೆ-ಎಂಆರ್ಪಿಎಲ್ ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026, ನೆಕ್ಸಸ್ ಮಾಲ್ನ ಫಿಜಾದಲ್ಲಿ ನಡೆದ ಅದ್ಧೂರಿ ಕೋಸ್ಟಲ್ ಸ್ಟಾರ್ಟ್ಅಪ್ ಎಕ್ಸಲೆನ್ಸ್ ಅವಾರ್ಡ್ಸ್ ಪ್ರದಾನ ಸಮಾರಂಭದೊಂದಿಗೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು.
ಚಿನ್ಮಯ ಮಿಷನ್, ಮಂಗಳೂರು ಇವರು 2026ರ ಏಪ್ರಿಲ್ 3ರಿಂದ ಏಪ್ರಿಲ್ 12ರವರೆಗೆ ಚಿನ್ಮಯ ಮಿಷನ್, ಶಾರದ ಸನ್ನಿಧಿ, ರೊಸಾರಿಯೋ ಚರ್ಚ್ ರೋಡ್, ಹೊಯ್ಗೆ ಬಜಾರ್ ನಲ್ಲಿ ಮಹಾಭಾರತದ ಕಥೆಗಳು ಈ ವಿಷಯದ ಕುರಿತು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ
ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ವಿಶ್ವ ಬಾಯಿಯ ಆರೋಗ್ಯ ದಿನ ಜಾಗ್ರತಿ ಕಾರ್ಯಕ್ರಮದ ಅಂಗವಾಗಿ ಪೆ ರಿಯಡೊಂಟಲಜಿ ವಿಭಾಗ,ಯೆನೆ ಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆಯಲ್ಲಿ ಸ್ನಾತಕೋತರ ದಂತ ವೈದ್ಯ ವಿದ್ಯಾರ್ಥಿಗಳ ಬೀದಿ ನಾಟಕದ ಮೂಲಕ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ತೇಜಸ್ವಿ ಇವರು ಬೆಳ್ಳಿಪಾಡಿ ಡಾ. ಶಮಂತ್ ರೈ ಅವರ ಮಾರ್ಗದರ್ಶನ
“ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ ಒಂದು ಚಿಂತನೆ”ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವು ಮಾ.20 ರಂದು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಜಾದ್ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ.
ನವೀನ ವಿಚಾರಗಳನ್ನು ಕ್ರಿಯಾತ್ಮಕ ಮೂಲ ಮಾದರಿಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ 24 ಗಂಟೆಗಳ ಹ್ಯಾಕಥಾನ್ ಪ್ರೋಟೋಥಾನ್ 2026 ಅನ್ನು ಮಾರ್ಚ್ 13 ಮತ್ತು 14, 2026 ರಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಉನ್ನತ ಶಿಕ್ಷಣದ ವೆಚ್ಚಗಳು ನಿರಂತರವಾಗಿ ಏರುತ್ತಿರುವ ಸಂದರ್ಭದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉದ್ಯಮ-ಕೇಂದ್ರಿತ ಶಿಕ್ಷಣಕ್ಕೆ ಪ್ರವೇಶವು ಆರ್ಥಿಕವಾಗಿ ಸವಾಲಾಗಿ ಪರಿಣಮಿಸುತ್ತಿದೆ.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹುಮಾನಿಟಿಸ್ ನ ಮಾಧ್ಯಮ ಅಧ್ಯಯನ ವಿಭಾಗವು “ಶೂಟಿಂಗ್ ಸ್ಟಾರ್ಸ್ 2026” ಎಂಬ ರಾಷ್ಟ್ರೀಯ ಮಾಧ್ಯಮ ವಿಚಾರ ಸಂಕಿರಣ ಮತ್ತು ಚಲನಚಿತ್ರೋತ್ಸವವನ್ನು ಮಾರ್ಚ್ 12, 2026ರಂದು ಯಶಸ್ವಿಯಾಗಿ ಆಯೋಜಿಸಿತು.
ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ “ಟೆಕ್ ಯುವ – 26” ಕಾರ್ಯಕ್ರಮವು ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರ ಮಾರ್ಗದರ್ಶನದೊಂದಿಗೆ ಉದ್ಘಾಟನೆಗೊಂಡಿತು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಮೂವರು ಹಿರಿಯ ವಿದ್ಯಾರ್ಥಿನಿಯರು ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಗಳಿಸಿದ್ದಾರೆ.
ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ, ಮಂಗಳೂರಿನಲ್ಲಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 9, 2026 ರಂದು ಯೆಂಡ್ಯೂರನ್ಸ್ ಸಭಾಂಗಣದಲ್ಲಿ ಜೆಂಡರ್ ಸೆನ್ಸಿಟೈಸೇಶನ್ ಸೆಲ್(ಲಿಂಗ ಸಂವೇದನಾ ಘಟಕ) ವತಿಯಿಂದ ಆಚರಿಸಲಾಯಿತು. ಈ ವರ್ಷದ ವಿಷಯ“ಗಿವ್ ಟು ಗೇನ್ (ಸಹಕಾರದಿಂದ ಅಭಿವೃದ್ಧಿ)” ಆಗಿತ್ತು.
ವಿಶ್ವ ಶ್ರವಣ ದಿನದ ಸಂದರ್ಭದಲ್ಲಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶ್ರವಣ ಮತ್ತು ವಾಕ್ ಭಾಷಾ ರೋಗಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಕಿವಿ ಮೂಗು ಮತ್ತು ಗಂಟಲು ಚಿಕಿತ್ಸಾ ವಿಭಾಗವು 4ನೇ ಮಾರ್ಚ್ 2026 ರಂದು ಆಸ್ಪತ್ರೆಯ ಆವರಣದಲ್ಲಿ ವಿಶ್ವ ಶ್ರವಣ ದಿನವನ್ನು ಆಚರಿಸಿತು.
ಮಂಗಳೂರು: ಯೆನೆಪೊಯ ದಂತ ಮಹಾವಿದ್ಯಾಲಯದಲ್ಲಿ ಭಾರತೀಯ ದಂತ ವೈದ್ಯರ ಸಂಘ – ದಕ್ಷಿಣ ಕನ್ನಡ ಶಾಖೆಯ ಸಹಯೋಗದಲ್ಲಿ ರಸ್ತೆ ಸುರಕ್ಷತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ಜವಾಬ್ದಾರಿಯುತ ರಸ್ತೆ ವರ್ತನೆ ಮತ್ತು ಸಂಚಾರ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು. ಎಸಿಪಿ ಶ್ರೀಮತಿ ನಜ್ಮಾ ಫಾರೂಖಿ, ಟ್ರಾಫಿಕ್ ಉಪವಿಭಾಗ, ಮಂಗಳೂರುನಗರ, ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಅವರು ರಸ್ತೆ ಅಪಘಾತಗಳ ಹೆಚ್ಚುತ್ತಿರುವ ಸಮಸ್ಯೆಯನ್ನು ಉಲ್ಲೇಖಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ […]
ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ, ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಸಿ.ವಿ.ರಾಮನ್ ಅವರು ಶ್ರೇಷ್ಟ ಆವಿಷ್ಕಾರಗಳನ್ನು ವಿಜ್ಞಾನ ಪ್ರಪಂಚದಲ್ಲಿ ಸಾಧಿಸಿತೋರಿದವರು. ಬೆಳಕಿನ ಚದುರುವಿಕೆಗೆ ಸಂಬಂಧಿಸಿದ ರಾಮನ್ ಪರಿಣಾಮಗಳನ್ನು ಕಂಡು ಹಿಡಿದವರು. ರಾಮನ್ ಪರಿಣಾಮದ ದಿನವಾದ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಪಿ ರಾಧಾಕೃಷ್ಣ ಹೇಳಿದರು.