ಮಂಗಳೂರು: ಉನ್ನತ ಶಿಕ್ಷಣದ ವೆಚ್ಚಗಳು ನಿರಂತರವಾಗಿ ಏರುತ್ತಿರುವ ಸಂದರ್ಭದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉದ್ಯಮ-ಕೇಂದ್ರಿತ ಶಿಕ್ಷಣಕ್ಕೆ ಪ್ರವೇಶವು ಆರ್ಥಿಕವಾಗಿ ಸವಾಲಾಗಿ ಪರಿಣಮಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸೇಂಟ್ ಅಲೋಶಿಯಸ್(ಡೀಮ್ಸ್ ಟು ಬಿ ಯೂನಿವರ್ಸಿಟಿ) ಮತ್ತು ಸಿಯೆರಾ ಲರ್ನಿಂಗ್ ಅಕಾಡೆಮಿಯ ಸಹಯೋಗದಲ್ಲಿ ಪ್ರತಿಭಾ ಆಧಾರಿತ ಸಾಂಸ್ಥಿಕ ಸ್ನಾನ್ಸರ್‌ಶಿಪ್ (Merit-Based Institutional Sponsorship) ಯೋಜನೆಯನ್ನು ಪರಿಚಯಿಸಲಾಗಿದೆ.
ಈ ಯೋಜನೆಯಡಿ ಅರ್ಹತೆ ಪಡೆಯುವ ಆಯ್ಕೆಯ ವಿದ್ಯಾರ್ಥಿಗಳು BCA in Al-Augmented Software Systems a BSc in Media and Creative Technologies ಪ್ರವೇಶ ಪಡೆಯುವಾಗ ಸಂಪೂರ್ಣ ಶುಲ್ಕವನ್ನು ತಕ್ಷಣ ಪಾವತಿಸುವ ಅಗತ್ಯವಿರುವುದಿಲ್ಲ.
ಪದವಿ ಪೂರ್ಣಗೊಂಡ ನಂತರ ಮಾತ್ರ ಸಂರಚಿತ ಪಾವತಿ ವ್ಯವಸ್ಥೆ ಆರಂಭವಾಗುತ್ತದೆ. ಈ ಎರಡೂ ಪದವಿ ಕಾರ್ಯಕ್ರಮಗಳು ಸೇಂಟ್ ಅಲೋಶಿಯಸ್ (ಡೀಮ್ಸ್ ಟು ಬಿ ಯೂನಿವರ್ಸಿಟಿ) ಅಡಿಯಲ್ಲಿ ನಡೆಯುತ್ತವೆ ಮತ್ತು UGC ಮಾನ್ಯತೆ ಹೊಂದಿವೆ. ಇವು ಸಿಯೆರಾ ಲರ್ನಿಂಗ್ ಅಕಾಡೆಮಿಯ Industry Embedded Programme (IEP) ಮಾದರಿಯನ್ನು ಆಧರಿಸಿ ರೂಪುಗೊಂಡಿವೆ.
ಯೋಜನೆಯ ಉದ್ದೇಶ ಮತ್ತು ಪರಿಹರಿಸುವ ಸಮಸ್ಯೆ ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದ ಸಮಸ್ಯೆಯೊಂದು ಇದೆ. ಉತ್ತಮ ಉದ್ಯೋಗಾವಕಾಶಗಳನ್ನು ನೀಡುವ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಲಾಭ ಪಡೆಯಬಹುದಾದ ಪ್ರತಿಭಾವಂತ ವಿದ್ಯಾರ್ಥಿಗಳೇ ಆರ್ಥಿಕ ಕಾರಣಗಳಿಂದ ಆ ಶಿಕ್ಷಣಕ್ಕೆ ಪ್ರವೇಶಿಸಲು ಅಸಮರ್ಥರಾಗುತ್ತಾರೆ.
ಸಾಮಾನ್ಯ ಶಿಕ್ಷಣ ಹಣಕಾಸು ವ್ಯವಸ್ಥೆಗಳಾದ ವಿದ್ಯಾರ್ಥಿ ಸಾಲಗಳು ಅಥವಾ ಕುಟುಂಬದ ಸಹಾಯವು ಮುಂಚಿತ ಆರ್ಥಿಕ ಒತ್ತಡವನ್ನು ಹೇರುತ್ತವೆ. ಇದರಿಂದ ಅನೇಕರು ಉದ್ಯಮ-ಕೇಂದ್ರಿತ ಪದವಿ ಕಾರ್ಯಕ್ರಮಗಳನ್ನು ಮುಂದೂಡುತ್ತಾರೆ ಅಥವಾ ಕೈಬಿಡುತ್ತಾರೆ. ಈ ಸ್ನಾನ್ಸರ್‌ಶಿಪ್ ಮಾದರಿಯು ಆರ್ಥಿಕ ಅಡೆತಡೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸಾಮರ್ಥ್ಯ ತೋರಿದ ವಿದ್ಯಾರ್ಥಿಗಳು ಶುಲ್ಕ ಪಾವತಿಯ ಚಿಂತೆಯಿಲ್ಲದೆ
ಶಿಕ್ಷಣವನ್ನು ಆರಂಭಿಸಬಹುದು. ಪದವಿ ನಂತರ ಉದ್ಯೋಗ ಪಡೆದ ನಂತರ ಪಾವತಿ ಆರಂಭವಾಗುವುದರಿಂದ ಆರ್ಥಿಕ ಸ್ಥಿರತೆಯೊಂದಿಗೆ ಶಿಕ್ಷಣವನ್ನು ಪೂರ್ಣಗೊಳಿಸಬಹುದು. ಸ್ಪಾನ್ಸರ್‌ಶಿಪ್ ಮೌಲ್ಯಮಾಪನ ಪ್ರಕ್ರಿಯೆ ಸ್ಪಾನ್ಸರ್‌ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸಿಯೆರಾ ಲರ್ನಿಂಗ್ ಅಕಾಡೆಮಿಯ ನಡೆಸುವ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡುತ್ತಾರೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

