ಮಂಗಳೂರು: ವಿಶ್ವ ಬಾಯಿಯ ಆರೋಗ್ಯ ದಿನ ಜಾಗ್ರತಿ ಕಾರ್ಯಕ್ರಮದ ಅಂಗವಾಗಿ ಪೆರಿಯಡೊಂಟಲಜಿ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆಯಲ್ಲಿ ಸ್ನಾತಕೋತರ ದಂತ ವೈದ್ಯ ವಿದ್ಯಾರ್ಥಿಗಳ ಬೀದಿ ನಾಟಕದ ಮೂಲಕ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಡಾ. ವಿನಿತಾ ಬೋಳಾರ್, ಮುಖ್ಯಸ್ಥರು, ಪೆ ರಿಯಡೊಂಟಲಜಿ ವಿಭಾಗ ಎಲ್ಲರನ್ನು ಸ್ವಾಗತಿಸಿದರು ಮತ್ತು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಡಾ. ಲಕ್ಷ್ಮಿ ಕಾಂತ್ ಚಾತ್ರ, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಮಾತನಾಡಿ, ಬಾಯಿಯ ಆರೋಗ್ಯ ಮತ್ತು ದಂತ ಆಸ್ಪತ್ರೆಯಲ್ಲಿ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಡಾ. ಶಾಮ್ ಎಸ್ ಭಟ್, ಡೀನ್, ಮಾತನಾಡಿ ಸಾರ್ವಜನಿಕರು ಆರೋಗ್ಯಕರ ಅಭ್ಯಾಸಗಳ ಜೊತೆಗೆ ಉತ್ತಮ ದಂತ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ದಂತ ಆರೋಗ್ಯ ಮಾಹಿತಿ ಕರಪತ್ರ ಮತ್ತು ಟೂತ್ ಪೇಸ್ಟ್ ನ್ನು ಹಂಚಲಾಯಿತು. ಪೆರಿಯಡೊಂಟಲಜಿ ವಿಭಾಗದ ದಂತ ವೈದ್ಯರು, ಸ್ನಾತಕೋತರ ದಂತ ವೈದ್ಯ ವಿದ್ಯಾರ್ಥಿಗಳು, ಸಿಬ್ಬಂದಿಗಳು,ವಿವಿಧ ದಂತ ವಿಭಾಗ ಗಳ ಉಪನ್ಯಾಸಕರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.