Showing 20 of 20873 articles • Page 961 of 1044
ಕೆಲವು ದಿನಗಳಿಂದ ವಿಚ್ಛೇದನದ ಸುದ್ದಿಯೇ ಕೇಳಲು ಸಿಗುತ್ತಿವೆ ಅದರಲ್ಲೂ ನಟ, ನಟಿಯರಲ್ಲೇ ಹೆಚ್ಚು. ಇದೀಗ ದುನಿಯಾ ವಿಜಯ್- ಪತ್ನಿ ನಾಗರತ್ನ ನಡುವೆ ವಿಚ್ಛೇದನ ತೀರ್ಪು ಇಂದು ಗೊತ್ತಾಗಲಿದೆ
ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ವಾರಗಳ ನಂತರ ಪೆಮಾ ಖಂಡು ಇಂದು ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕುವೈತ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕೇರಳದ ಮೂಲದ ನಾಗರಿಕರ ಕುಟುಂಬಗಳಿಗೆ ತಲಾ ₹5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಇಲ್ಲಿನ (ಕೇರಳ) ಸರ್ಕಾರ ಇಂದು ಹೇಳಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಎನಿಸಿಕೊಂಡರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ. ಹೀಗಾಗಿ ಅರೆಸ್ಟ್ ಮಾಡಿದ್ದಾರೆ ಈ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ.
ಇಂಟರ್ ಮಿಯಾಮಿ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ, ಅವರು ಮತ್ತೆ ನಿವೃತ್ತಿಯ ಸುಳಿವು ನೀಡಿದ್ದಾರೆ. ಮುಂದಿನ ವರ್ಷ ಇಂಟರ್ ಮಿಯಾಮಿಯೊಂದಿಗಿನ ಒಪ್ಪಂದ ಮುಗಿಯುತ್ತಿದ್ದಂತೆ ಫುಟ್ಬಾಲ್ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ನಂದಿಕೂರಿನಿಂದ ಇನ್ನ ಮಾರ್ಗವಾಗಿ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ 400 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ಪೀಡರ್ ಟವರ್ ಅಳವಡಿಕೆಯ ಯೋಜನೆಯ ಬಗ್ಗೆ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.
ಕುವೈತ್ ನ ಬಹುಮಹಡಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ಅಗ್ನಿ ಅನಾಹುತದಲ್ಲಿ ಕಾಸರಗೋಡು ಮೂಲದ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ವಿಶ್ವವಿದ್ಯಾಲಯವು ಮಾರ್ಚ್ ಏಪ್ರಿಲ್ನಲ್ಲಿ ನಡೆಸಿದ ಸ್ನಾತಕ ಪದವಿಯ ಮೊದಲ ಸೆಮಿಸ್ಟರ್ನ ಫಲಿತಾಂಶವನ್ನು ಬುಧವಾರ ಘೋಷಿಸಿದೆ. ಕುಲಪತಿ ಪ್ರೊ.ಬಿ.ಎಸ್. ಬಿರಾದಾರ, ಕುಲಸಚಿವ (ಮೌಲ್ಯಮಾಪನ) ಪರಮೇಶ್ವರ ನಾಯಕ ಟಿ. ಅವರು ಫಲಿತಾಂಶ ಘೋಷಿಸಿದರು.
ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ 46 ಜನರಲ್ಲಿ ಶಂಕಿತ ಜ್ವರ ಪತ್ತೆಯಾಗಿದ್ದು, ಅದರಲ್ಲಿ ನಾಲ್ವರಲ್ಲಿ ಡೆಂಗ್ಯೂ ಇರುವುದು ಪಕ್ಕಾ ಆಗಿದೆ. ಮೂರು ವರ್ಷದ ಮಗು ಕೂಡ ಸಾವಿಗೀಡಾಗಿದ್ದು, ಆ ಮಗುವಿನಲ್ಲೂ ಡೆಂಗ್ಯೂ ಜ್ವರ ಇದ್ದಿದ್ದು ಪತ್ತೆಯಾಗಿದೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಡಯಾಲಿಸಿಸ್ ಸಿಬ್ಬಂದಿ ನಾಗರಾಜ್ (35) ಮೃತಪಟ್ಟವರು.
ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಸುಪ್ರೀಂ ಕೋರ್ಟ್ನಲ್ಲಿ ಗುರುವಾರ ಮತ್ತೊಮ್ಮೆ ವಿಚಾರಣೆ ನಡೆಯಿತು.
ಬಜ್ಪೆಯಲ್ಲಿ ವಾಸ್ತವಿರುವ ಗುಲಾಬಿ ಅಜ್ಜಿ ಮತ್ತು ಮನೆಯ ಸ್ಥಿತಿಗತಿಗಳ ಬಗ್ಗೆ ಜೂನ್ 11 ರಂದು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಅಜ್ಜಿಯ ಮನೆಗೆ ಭೇಟಿ ನೀಡಿ ಶಾಸಕ ಉಮಾನಾಥ್ ಕೋಟ್ಯಾನ್ ಸ್ಪಂಧಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ ನಟ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ಗ್ಯಾಂಗ್ ನ್ನು ಬಂಧಿಸಲಾಗಿದೆ. ಆದರೀಗ ಅವರ ಜೊತೆಗೆ ಮತ್ತೋರ್ವ ಸ್ಯಾಂಡಲ್ವುಡ್ ನಟ ಪ್ರದೋಶ್ ಸಹ ಅರೆಸ್ಟ್ ಆಗಿದ್ದಾರೆ.
ಒಡಿಶಾದ ಪುರಿ ಜಗನ್ನಾಥ ದೇವಾಲಯ ಪ್ರವೇಶಿಸಲು ಭಕ್ತರಿಗೆ ಎಲ್ಲಾ ನಾಲ್ಕು ಬಾಗಿಲುಗಳನ್ನು ಇಂದು (ಗುರುವಾರ) ತೆರೆಯಲಾಗಿದೆ. ಸಿಂಹ ದ್ವಾರ, ಅಶ್ವ ದ್ವಾರ, ವ್ಯಾಗ್ರ ದ್ವಾರ, ಹಸ್ತಿ ದ್ವಾರ ಇವೇ ನಾಲ್ಕು ದೇಗುಲದ ದ್ವಾರಗಳಾಗಿವೆ.
ರೌಡಿಶೀಟರ್ ನ ಬರ್ಬರ ಹತ್ಯೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಚೇಪಾಳ್ಯ ನಾಗ ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ಮುತ್ತುರಾಯನಗರ ಸಮೀಪದ ರೈಲ್ವೇ ಟ್ರಾಕ್ ಸಮೀಪ ಎದುರಾಳಿ ಗ್ಯಾಂಗ್ವೊಂದು ಅಟ್ಯಾಕ್ ಮಾಡಿ ಕೊಂದು ಹಾಕಿದ್ದಾರೆ.
ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಹಿನ್ನೆಲೆಯಲ್ಲಿ ಇಂದು (ಜೂನ್ 13) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ
ಚಾರ್ಮಡಿ ಘಾಟ್ ನಲ್ಲಿ ಕಡಾನೆಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಬಸ್ ಗೆ ಅಡ್ಡಲಾಗಿ ಬಂದು ನಿಂತ ಒಂಟಿ ಸಲಗವೊಂದು ಬಸ್ ಗೆ ದಾರಿ ಬಿಡದೇ ಸತಾಯಿಸಿರುವ ಘಟನೆ ನಡೆದಿದೆ.
ಇಲಿಯನ್ನು ಸಾಯಿಸಲು ಹಿಂಜರಿಯುತ್ತಿದ್ದ ಹುಡುಗಿ ಪವಿತ್ರಾ ಗೌಡ. ಅವಳು ಒಬ್ಬರನ್ನ ಕೊಲೆ ಮಾಡುತ್ತಾಳೆ ಅಂದ್ರೆ ಅದು ಸುಳ್ಳು ಎಂದು ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ.
ಅಗತ್ಯವಿದ್ದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸಲಿದ್ದಾರೆ. ಯಡಿಯೂರಪ್ಪ ಬಂದು ನೋಟಿಸ್ಗೆ ಉತ್ತರ ನೀಡಬೇಕಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.
ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ವ್ಯವಸ್ಥೆಯ ಬದಲಾವಣೆಗೆ ಚಿಂತನೆ ನಡೆಸಿದ್ದು, ಫಾಸ್ಟ್ಟ್ಯಾಗ್ ಟೋಲ್ ಸಂಗ್ರಹಕ್ಕಿಂತ ಭಿನ್ನವಾದ, ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಂ ಜಾರಿಗೆ ತರುವುದು ಸರ್ಕಾರದ ಯೋಜನೆಯಾಗಿದೆ.