ಬೆಂಗಳೂರು: ನಟ ದರ್ಶನ್ ಅವರು ‘ಡೆವಿಲ್​: ದಿ ಹೀರೊ’ ಸಿನಿಮಾದ ಕೆಲಸಗಳ ನಡುವೆ ಬಿಡುವು ಪಡೆದ ದುಬೈಗೆ ತೆರಳಿದ್ದಾರೆ. ಅಲ್ಲಿ ಪತ್ನಿ ವಿಜಯಲಕ್ಷ್ಮಿ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ದುಬೈನಲ್ಲಿರುವ ಅಭಿಮಾನಿಗಳು ಸೆಲೆಬ್ರೇಷನ್ ಮಾಡಿದ್ದು, ನಟ ದರ್ಶನ್ ಪತ್ನಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಫೋಟೋ, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.ಈ ಬಾರಿ ನಿರ್ಮಾಪಕಿ ಶೈಲಜಾ ನಾಗ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿ ಫೋಟೊ ಹಾಕಿದ್ದರು.

ಅದರ ಸ್ಕ್ರೀನ್‌ಶಾಟ್ ಅನ್ನು ವಿಜಯಲಕ್ಷ್ಮೀ ದರ್ಶನ್ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮೀ ಆ ಫೋಟೋ ಹಂಚಿಕೊಂಡ ಎರಡು ಗಂಟೆಯ ಬಳಿಕ ಪವಿತ್ರಾ ಗೌಡ ಕರ್ಮದ ಬಗ್ಗೆ ದರ್ಶನ್ ಮಾತನಾಡಿರುವ ಸ್ಟೇಟಸ್ ಹಾಕಿದ್ದಾರೆ.

ಅದರಲ್ಲಿ, “ಕರ್ಮ ಎನ್ನುವುದು ಬ್ಯಾಗೇಜ್ ಥರ. ಏನನ್ನ ನೀವೂ ಅದರಲ್ಲಿ ಫಿಲ್ ಮಾಡ್ತೀರ ಅದೇ ನಿಮಗೆ ಸಿಗುತ್ತೆ. ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಅಜ್ಜಿ, ತಾತ ಹೇಳ್ತಾ ಇದ್ದರು. ಈಗ ಕರ್ಮ ಮಾಡ್ತಾ ಇದ್ದೀಯಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆಗೆಲ್ಲಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗ್ತಾ ಇತ್ತು. ಈಗ ಅಲ್ಲೆ ಡ್ರಾ ಅಲ್ಲೇ ಬಹುಮಾನ’ ಎಂದು ಹೇಳಿದ್ದರು. ಈ ವಿಡಿಯೋವನ್ನು ಪವಿತ್ರ ಹಂಚಿಕೊಂಡಿದ್ದಾರೆ.

ಈ ವಿಚಾರಕ್ಕೆ ಅವರ ಅಭಿಮಾನಿಗಳು ಕೋಪವಾಗಿದ್ದಾರೆ. ಆದರೆ ಇಲ್ಲಿ ಪವಿತ್ರಾ ಗೌಡ ಯಾರಿಗೆ ಕರ್ಮದ ಪಾಠ ಮಾಡಿದ್ರು ಗೊತ್ತಿಲ್ಲ. ಪಕ್ಕಾ ಇದು ವಿಜಯಲಕ್ಷ್ಮೀ ಅವರಿಗೆ ಎಂದು ಕಮೆಂಟ್‌ ಮಾಡಿದ್ದಾರೆ.

ಮಾಡೆಲ್‌ ಪವಿತ್ರ ಗೌಡ ಅವರು ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್ ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದಾದ ಮೇಲೆ ಆ ಪೋಸ್ಟ್‌ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದರು.