ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಮ್. ಎಸ್ ಧೋನಿ ಅವರು ಬಾರ್ ನಲ್ಲಿರುವ ವಿಡಿಯೋವೊಂದು ವೈರಲ್ ಆಗಿದೆ. ಆರ್ಸಿಬಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋತ ಬಳಿಕ ಸಿಎಸ್ಕೆ ತಂಡವು ಐಪಿಎಲ್ 2024 ರಿಂದ ಹೊರಬಿದ್ದಿದೆ.
ಈ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬಾರ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಟ್ಯಾಗ್ಲೈನ್ನೊಂದಿಗೆ ವಿಡಿಯೋ ವೈರಲ್ ಆಗಿದೆ.
ಆದರೆ ಈ ವಿಡಿಯೋ ಇತ್ತೀಚಿನದಲ್ಲ. ಏಕೆಂದರೆ ಸಿಎಸ್ಕೆ ತಂಡದ ಸೋಲಿನ ಬಳಿಕ ಹತಾಶರಾಗಿದ್ದ ಧೋನಿ ಅಂದೇ ತವರಿಗೆ ತೆರಳಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ಜಡೇಜಾ ಜೊತೆ ಬಾರ್ನಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಯಿಲ್ಲ ಎನ್ನಲಾಗ್ತಿದೆ.
ಆದರೂ ಒಂದು ಕಡೆ ನೋಡುವುದಾದರೇ ಈ ವಿಡಿಯೋ ಈ ಬಾರಿಯ ಐಪಿಎಲ್ ಸಂದರ್ಭದ್ದು ಎಂಬುದು ವಿಶೇಷ. ಏಕೆಂದರೆ ಧೋನಿ ಹಲವು ವರ್ಷಗಳ ಬಳಿಕ ಉದ್ದನೆಯ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದರು. ಈ ವಿಡಿಯೋದಲ್ಲೂ ಲಾಂಗ್ ಹೇರ್ ಸ್ಟೈಲ್ ಅನ್ನು ಕಾಣಬಹುದು. ಹೀಗಾಗಿ ಇದು ಈ ಬಾರಿಯ ಐಪಿಎಲ್ ವೇಳೆ ಸೆರೆ ಹಿಡಿಯಲಾದ ವಿಡಿಯೋ ಎಂಬುದು ಸ್ಪಷ್ಟವಾಗಿದೆ.
ಸದ್ಯ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬಾರ್ನಲ್ಲಿ ಚಿಲ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ನಾನಾ ರೀತಿಯ ಮೀಮ್ಸ್ಗಳು ಕೂಡ ಹರಿದಾಡಲಾರಂಭಿಸಿದೆ.

