ಮಧ್ಯಪ್ರದೇಶ : ಸಿವಿಲ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 21 ವರ್ಷದ ಪುನೀತ್ ದುಬೆ ಹಾಸ್ಟಲ್‌ನ ತನ್ನ ಕೊಠಡಿಯಲ್ಲಿ ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.
ವಿಚಿತ್ರ ಎಂಬಂತೆ ಯುವಕ ಪುನೀತ್ ದುಬೆ ಹಸಿರು ಬಳೆ ತೊಟ್ಟು ,ವಧುವಿನಂತೆ ಸಿಂಗಾರಗೊಂಡು ಹಾಸ್ಟೆಲ್ನ ತನ್ನ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ. ಮಗನ ಶವ ಕಂಡ ಪೋಷಕರು ಇದು ಕೊಲೆ ಎಂದಿದ್ದಾರೆ ಆದರೆ ಇದು ಕೊಲೆಯೋ ಅಥಾವ ಆತ್ಮಹತ್ಯೆಯೋ ಇನ್ನು ತಿಳಿದು ಬಂದಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಎರಡನೇ ವರ್ಷದ ಬಿಎಸ್ಸಿ ಓದುತ್ತಿರುವ ವಿದ್ಯಾರ್ಥಿ ಪುನೀತ್, ಇಂದೋರ್‌ನ ರಂಜಿತ್ ಸಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ, ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ (MPPSC) ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಪತ್ತೆಯಾದಗಾ ಶವದ ಬಳಿ ರಕ್ತದ ಮಡುವಿತ್ತು . ಹೀಗಾಗಿ ಪುನೀತ್ ಸಾವನ್ನೂ ಆತ್ಮಹತ್ಯತೆ ಮತ್ತು ಕೊಲೆ ಎರಡೂ ಕೋನದಿಂದಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

