ಛತ್ತೀಸ್ಗಢ : ಛತ್ತೀಸ್ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ಭೀಕರ ಅಪಘಾತ ನಡೆದಿದ್ದು ಕಣಿವೆಗೆ ಮಿನಿ ಗೂಡ್ಸ್ ಉರುಳಿಬಿದ್ದ ಪರಿಣಾಮ 18 ಮಂದಿ ಸಾವನಪ್ಪಿದ್ದಾರೆ.ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಈ ಘಟನೆ ಸೋಮವಾರ ಜಜ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್ ಬಳಿ ಮಿನಿ ಗೂಡ್ಸ್ ಕಣಿವೆಗೆ ಉರುಳಿದೆ. ಮದ್ಯಾಹ್ನ 1.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ.
ಸರಕು ತುಂಬುವ ವಾಹನದಲ್ಲಿ ಜನರು ಸಂಚರಿಸುತ್ತಿದ್ದರು. ಹೀಗೆ ಸಂಚರಿಸುವ ವೇಳೆ ವಾಹನ ಸ್ಕಿಡ್ ಆಗಿ ಕಣಿವೆಗೆ ಉರುಳಿ ಬಿದ್ದಿದೆ. ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.

