ಬೆಂಗಳೂರು : ಇಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಲಿವೆ. ಇನ್ನೇನು ಪಂದ್ಯಕ್ಕೆ ಕ್ಷಣಗಣನೆ ಉಳಿದಿದ್ದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಪಂದ್ಯಕ್ಕೆ ಸಜ್ಜಾಗಿದೆ.ಇಂದಿನ ಪಂದ್ಯಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್ 17 ಪಂದ್ಯ ಗೆದ್ದಿದೆ. ಹೈದರಾಬಾದ್ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಹೀಗಾಗಿ ಈ ಬಾರಿಯ ಊಭಯ ತಂಡಗಳ ಯಾವುದು ಗೆಲುವಿನ ಜಯಭೇರಿ ಬಾರಿಸುವುದೋ ಎಂದು ಕಾದುನೋಡಬೇಕಾಗಿದೆ.

