Showing 20 of 20730 articles • Page 913 of 1037
ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಈಗಾಗಲೇ ನಿಗದಿ ಆಗಿದೆ. ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲಿದ್ದಾರೆ.
ನೇಜಾರು ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.
ಇಡೀ ದೇಶದಲ್ಲೇ ಸೆನ್ಷೇಷನ್ ಅನಿಸಿಕೊಂಡ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಒಂದು ವಿಕಿಪೀಡಿಯ ಪೇಜ್ ಕ್ರಿಯೇಟ್ ಮಾಡಲಾಗಿದೆ.
ಚಾಲಕನೋರ್ವ ಮೂರ್ಛೆಹೋದ ಪರಿಣಾಮ ಸಿಟಿ ಬಸ್ ವೊಂದು ಹಿಂಮುಖವಾಗಿ ಚಲಿಸಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಉಡುಪಿಯ ಕೆಳಪರ್ಕಳದ ಬಳಿ ಇಂದು ಸಂಜೆ ಸಂಭವಿಸಿದೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್ ಶಾಕ್ವೊಂದನ್ನು ನೀಡಿದೆ. ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಮಹಿಳಾ ಆಯೋಗದ ಸೆಲ್ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ತಿಳಿಸಿದರು.
ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರು 2024 ರ PEN ಪಿಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ ಇದು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ಇಂದು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ.
ಮಳೆ ಹಿನ್ನಲೆ ಮಂಗಳೂರು ನಗರದ ಕೊಡಿಯಾಲ್ ಬೈಲ್ ಬಳಿ ಇರುವ ಯೂನಿಯನ್ ಬ್ಯಾಂಕ್ನ ಎಸಿ ಯೊಳಗಡೆ ಹೆಬ್ಬಾವು ಮರಿ ಸೇರಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ನೆಲಜಿ ಗ್ರಾಮದಲ್ಲಿ ಯುವತಿಯೊಬ್ಬಳು ಹೃದಯಾಘಾತದಿಂದ ಮೃತ ಪಟ್ಟಿರುವ ಘಟನೆ ನಡೆದಿದೆ. ಮಡಿಕೇರಿ ತಾ| ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಎಂಬುವವರ ಪುತ್ರಿ ನಿಲಿಕಾ ಪೊನ್ನಪ್ಪ (24) ಮೃತ ಯುವತಿ.
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ ಕಾಣದೇ ಕಾರೊಂದು ಸೇತುವೆಯಿಂದ ಹೊಳೆಗೆ ಬಿದ್ದಿದೆ. ಕಾರು ಹೊಳೆಗೆ ಬಿದ್ದ ಕೂಡಲೇ ಕಾರಿನಿಂದ ಹೊರ ಬಂದು ಮರದ ಗೆಲ್ಲು ಹಿಡಿದು ಆಶ್ರಯ ಪಡೆದಿದ್ದರು.
ಹೆಸ್ಕಾಂ ಮಾಜಿ ಕಾರ್ಯಪಾಲಕ ಇಂಜಿನಿಯರ್ ಟಿ.ಬಿ.ಮಜ್ಜಗಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ 13 ಮಂದಿಯನ್ನು ದೋಷಿ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೋಡಲು ನಿತ್ಯ ನೂರಾರು ‘ಡಿ’ ಬಾಸ್ ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ.
ಇನ್ಮುಂದೆ 70 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಆಸ್ಟ್ರಿಯಾದಲ್ಲಿ ಧೂಮಪಾನಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ವೈದ್ಯರ ಬಳಿಗೆ ಹೋದಾಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.
ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿ ಅವರಲ್ಲ ಎಂದರು.
ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಅವುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಇನ್ಫ್ಲುಯೆನ್ಸರ್ಗಳೂ ನೇರವಾಗಿ ಹೊಣೆಗಾರರಾಗುವಂತೆ ಮಾಡಬೇಕು.
ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಬೆಂಗಳೂರು ವಿಶ್ವ ವಿಖ್ಯಾತವಾಗಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.