ನವದೆಹಲಿ:  ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಲೋಕಸಭೆ ಚುನಾವಣೆಯ ಮತದಾನ ಕೊನೆಗೊಳ್ಳಲಿದೆ. ಹೀಗಾಗಿ ಇಂದೇ ಎಕ್ಸಿಟ್‌ ಪೋಲ್‌ ಫಲಿತಾಂಶವೂ ಹೊರಬೀಳಲಿದೆ.

ಕೊನೆಯ ಹಂತದ ಮತದಾನ ನಡೆಯಲಿರುವ ಜೂ. 1ರಂದು ಎಕ್ಸಿಟ್‌ ಪೋಲ್‌ ನಡೆಯಲಿದೆ. ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಲಿದ್ದು, 6:30ರ ನಂತರ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬೀಳಲಿದೆ.

ಎಕ್ಸಿಟ್‌ ಪೋಲ್‌ :  ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಲು ವಿವಿಧ ಏಜೆನ್ಸಿಗಳು ವಿವಿಧ ವಿಧಾನಗಳು ಮತ್ತು ಮಾದರಿಗಳನ್ನು ಬಳಸಿಕೊಳ್ಳುತ್ತವೆ. ವೈಯಕ್ತಿಕವಾಗಿ ಅಥವಾ ಆನ್‌ಲೈನ್‌ ಸರ್ವೆ ಮೂಲಕ ಮತದಾರರ ಅಭಿಪ್ರಾಯ ಪಡೆಯಲಾಗುತ್ತದೆ.

ಇಂಡಿಯಾ ಟುಡೆ-ಆಕ್ಸಿಸ್, ಸಿಎನ್‌ಎನ್ ನ್ಯೂಸ್ 18-ಐಪಿಎಸ್‌ಒಎಸ್, ಟೈಮ್ಸ್ ನೌ-ವಿಎಂಆರ್, ರಿಪಬ್ಲಿಕ್-ಜನ್ ಕಿ ಬಾತ್, ರಿಪಬ್ಲಿಕ್-ಸಿವೋಟರ್, ನ್ಯೂಸ್‌ಎಕ್ಸ್-ಎನ್‌ಇಟಿಎ ಮತ್ತು ಟುಡೇಸ್ ಚಾಣಕ್ಯ ಮುಂತಾದವು ಎಕ್ಸಿಟ್ ಪೋಲ್‌ಗಳನ್ನು ನಡೆಸುವ ಕೆಲವು ಪ್ರಸಿದ್ಧ ಸಂಸ್ಥೆಗಳು.

ಎಕ್ಸಿಟ್ ಪೋಲ್‌ಗಳನ್ನು ಯಾವಾಗ ನಡೆಸಬಹುದು ಮತ್ತು ಪ್ರಕಟಿಸಬಹುದು ಎಂಬುದಕ್ಕೆ ಇಸಿಐ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಎಕ್ಸಿಟ್ ಪೋಲ್‌ಗಳಿಗೆ ನಿರ್ದಿಷ್ಟ ಸಮಯದೊಳಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಮತದಾನ ಮುಗಿದ ನಂತರವೇ ಇದನ್ನು ಪ್ರಕಟಿಸಬೇಕು. ಮತದಾನದ ಅವಧಿ ಮುಗಿಯುವ ಮೊದಲು ಭಾರತದ ಯಾವುದೇ ಭಾಗದಲ್ಲಿ ಎಕ್ಸಿಟ್‌ ಪೋಲ್‌ ಫಲಿತಾಂಶ ಪ್ರಕಟಿಸಬಾರದು.