ಚಿತ್ರದುರ್ಗ: ಚಳ್ಳಕೆರೆ-ಹಿರಿಯೂರ ಮಾರ್ಗ ಮಧ್ಯದ ಆರ್.ಕೆ.ಪವರ್ ಜಿನ್ ಬಳಿ  ಚಲಿಸುತ್ತಿದ್ದ ಲಾರಿಗೆ ಮಿನಿ ಟ್ರಕ್ ಡಿಕ್ಕಿ ಹೊಡೆದ ಘಟನೆ ಘಟನೆ ನಡೆದಿದೆ.

ಈ ಘಟನೆಯಲ್ಲಿ  ಶಿವಲಿಂಗ (65), ರಮೇಶ್ (55) ಎಂಬ  ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಇಬ್ಬರು ಶಿವಲಿಂಗ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದವರು.

ಮೃತ ಇಬ್ಬರು ಇಬ್ಬರೂ ಕುರಿ ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಚಳ್ಳಕೆರೆಯಿಂದ‌ ಹಿರಿಯೂರಿಗೆ ಕುರಿ ವ್ಯಾಪಾರಕ್ಕೆ‌ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ‌ ಹಿರಿಯೂರು ಗ್ರಾಮಾಂತರ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಘಟನೆ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.