ಬೆಂಗಳೂರು: ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದ್ದು, ಈ ಬಾರಿ ಅನಿಲ್​ ಕಪೂರ್​  ನಡೆಸಿಕೊಡಲಿದ್ದಾರೆ. ಈ ಬಗ್ಗೆ ಜಿಯೋ ಸಿನಿಮಾ ಹೊಸ ಪ್ರೋಮೊ ಹಂಚಿಕೊಂಡಿದೆ.

“ಬಿಗ್ ಬಾಸ್ OTT ಯ ಹೊಸ ಸೀಸನ್‌ಗೆ ಹೊಸ ಹೋಸ್ಟ್ʼʼಎಂದು ಪ್ರೋಮೊ ಹಂಚಿಕೊಂಡಿದೆ ಜಿಯೋ ಸಿನಿಮಾ. ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್​ ಕಪೂರ್​ ಎಂಬುದು ಖಚಿತವಾಗಿದೆ.

ಆರಂಭದಲ್ಲಿ ಒಟಿಟಿ ಸೀಸನನ್ನು ಕರಣ್ ಜೋಹರ್ ಹೋಸ್ಟ್ ಮಾಡಿದರು, ನಂತರ ಎರಡನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮಾಡಿದರು. ಈಗ  ಅನಿಲ್​ ಕಪೂರ್​  ಮಾಡಲಿದ್ದಾರೆ.

ಅನಿಲ್ ಕಪೂರ್ ಅವರ ಹೋಸ್ಟಿಂಗ್ ಜತೆಗೆ ಈ ಬಾರಿ ಜನಪ್ರಿಯ ತಾರೆಗಳಾದ ಶಿವಂಗಿ ಜೋಶಿ ಮತ್ತು ಶಫಕ್ ನಾಜ್ ಕೂಡ ಇರಲಿದ್ದಾರೆ ಎನ್ನಲಾಗಿದೆ.

ದಲ್ಜಿತ್ ಕೌರ್, ಶೆಹಜಾದಾ ಧಾಮಿ, ಪ್ರತೀಕ್ಷಾ ಹೊನ್ಮುಖೆ ಮತ್ತು ಅರ್ಹಾನ್ ಬೆಹ್ಲ್ ಅವರಂತಹ ಸೆಲೆಬ್ರಿಟಿಗಳು ‘ಬಿಗ್ ಬಾಸ್ OTT 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.