Bengaluru 23°C
Ad

ಬೇಸಿಗೆಯಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಏನೆಲ್ಲಾ ಅನಾನುಕೂಲಗಳಿದೆ ಗೊತ್ತಾ?

ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಜನರ ದಿನ ಆರಂಭವಾಗುವುದು ಚಹಾದ ಜೊತೆಗೆ, ಬೆಳಿಗ್ಗೆ ಬಿಸಿ ಶುಂಠಿ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿ ಹೊಸ ಚೈತನ್ಯ ಹುಟ್ಟುತ್ತೆ ಎಂದು ಎಷ್ಟೋ ಜನ ಹೇಳುತ್ತಾರೆ. ಆದರೆ ಬೆಳಿಗ್ಗೆ ಮತ್ತು ಸಂಜೆ ಎಲ್ಲಾ ಸಮಯದಲ್ಲೂ ಶುಂಠಿ ಚಹಾ ಕುಡಿಯುವ ಅಭ್ಯಾಸವು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಜನರ ದಿನ ಆರಂಭವಾಗುವುದು ಚಹಾದ ಜೊತೆಗೆ, ಬೆಳಿಗ್ಗೆ ಬಿಸಿ ಶುಂಠಿ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿ ಹೊಸ ಚೈತನ್ಯ ಹುಟ್ಟುತ್ತೆ ಎಂದು ಎಷ್ಟೋ ಜನ ಹೇಳುತ್ತಾರೆ. ಆದರೆ ಬೆಳಿಗ್ಗೆ ಮತ್ತು ಸಂಜೆ ಎಲ್ಲಾ ಸಮಯದಲ್ಲೂ ಶುಂಠಿ ಚಹಾ ಕುಡಿಯುವ ಅಭ್ಯಾಸವು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮುಂಜಾನೆ ಒಂದು ಕಪ್ ಚಹಾ ಇಡೀ ದಿನವನ್ನು ಉಲ್ಲಾಸವಾಗಿಡೋದಕ್ಕೆ ಸಹಾಯ ಮಾಡುತ್ತದೆ. ಆಯಾಸ, ಒತ್ತಡ ಅಥವಾ ಕಡಿಮೆ ಶಕ್ತಿಯ ಅನುಭವವಾಗಿರಲಿ, ಚಹಾ ಕುಡಿಯುವ ಮೂಲಕ ಎಲ್ಲಾ ಸಮಸ್ಯೆಗಳು ದೂರ ಓಡುತ್ತದೆ.

ಶುಂಠಿಯ ಪರಿಣಾಮವು ತುಂಬಾನೆ ಹೀಟ್ ಆಗಿರುತ್ತೆ, ಇದರಿಂದಾಗಿ ಬೇಸಿಗೆಯಲ್ಲಿ ಅನೇಕ ಕಾರಣಗಳಿಂದಾಗಿ ಹೆಚ್ಚು ಬಾರಿ ಶುಂಠಿ ಚಹಾ ಕುಡಿಯೋದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಶುಂಠಿಯಲ್ಲಿ ಜಿಂಜರಾಲ್ ಎಂಬ ಅಂಶವಿದೆ, ಇದು ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ, ಆದರೆ ಅದರ ಹೆಚ್ಚುವರಿ ಪ್ರಮಾಣವು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಇದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ.

ರಕ್ತದೊತ್ತಡ ಕಡಿಮೆ ಇರುವವರು ಶುಂಠಿ ಚಹಾ ಕುಡಿಯುವುದನ್ನು ತಪ್ಪಿಸಬೇಕು. ಇದು ದೇಹದಲ್ಲಿ ಶಕ್ತಿಯನ್ನು ಅನುಭವಿಸುವ ಬದಲು ತಲೆತಿರುಗುವಿಕೆ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು, ಆದರೆ ಶುಂಠಿ ಚಹಾವನ್ನು ಅಧಿಕ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಶುಂಠಿ ಚಹಾ ಸಹ ಹಾನಿಕಾರಕವಾಗಿದೆ. ಶುಂಠಿ ಚಹಾವನ್ನು ಅತಿಯಾಗಿ ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗಬಹುದು. ನಿದ್ರೆಯ ಕೊರತೆಯು ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಶುಂಠಿ ಚಹಾವನ್ನು ಅತಿಯಾಗಿ ಕುಡಿಯುವುದರಿಂದ ಅತಿಸಾರದ ಸಮಸ್ಯೆಗಳು ಉಂಟಾಗಬಹುದು. ಅತಿಸಾರವು ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆಯು ಪರಿಸ್ಥಿತಿಯನ್ನು ಹೆಚ್ಚು ಗಂಭೀರಗೊಳಿಸುತ್ತದೆ.

ರಕ್ತಸ್ರಾವದ ಅಸ್ವಸ್ಥತೆ ಹೊಂದಿರುವ ಜನರು ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು, ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಈಗಾಗಲೇ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರಲ್ಲಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.

 

Ad
Ad
Nk Channel Final 21 09 2023
Ad