Showing 20 of 21595 articles • Page 48 of 1080
ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಆರ್.ಎಸ್.ಎಸ್ ಸಂಘ ಪರಿವಾರದವರು ಶುದ್ಧೀಕರಿಸಿ ಅಸ್ಪೃಶ್ಯತೆ ಆಚರಿಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಮಿತಿ ಮೈಸೂರು ಜಿಲ್ಲಾ ಘಟಕವು ಮೈಸೂರಿನಲ್ಲಿ ಪತ್ರಿಭಟನೆ ನಡೆಸಲಾಯಿತು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಹೈಕೋರ್ಟ್ನ ಸಂಚಾರಿ ಪೀಠವನ್ನು ಕರಾವಳಿ ಭಾಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಸಂಘಟಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ಯು-ಆ್ಯಕ್ಟ್ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಆಗಸ್ಟ್ 22ರಂದು ಉಡುಪಿಯಲ್ಲಿ ಸಭೆ ನಡೆಯಲಿದೆ.
ಮೂಡುಜೆಪ್ಪು, ಕೆಲರಾಯಿ ನಿವಾಸಿ ಹಾಗೂ ದಿವಂಗತ ಗಿಲ್ಬರ್ಟ್ ಮೊಂತೆರೊ ಅವರ ಧರ್ಮಪತ್ನಿ ಪ್ರೆಸಿಲ್ಲಾ ಮೊಂತೆರೊ (81) ಅವರು ಅಲ್ಪಕಾಲದ ಅಸ್ವಾಸ್ಥ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 19ರಂದು ನಿಧನರಾದರು.
ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಯೆನೆಪೊಯ ನರ್ಸಿಂಗ್ ಕಾಲೇಜಿನಲ್ಲಿ ಬಿ.ಎಸ್ಸಿ., ಪಿ.ಬಿ.ಬಿ.ಎಸ್ಸಿ. ಹಾಗೂಎಂ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪಯಣಕ್ಕೆ ಸ್ವಾಗತಿಸುವ ‘ದೀಕ್ಷಾರಂಭ’ ಕಾರ್ಯಕ್ರಮವನ್ನುಆಗಸ್ಟ್ 19ರಂದು ಆಯೋಜಿಸಲಾಯಿತು.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ–ಕೇರಳ ವತಿಯಿಂದ 19ನೇ ವರ್ಷದ ‘ಭೂಮಿ ಹಬ್ಬ ಹಾಗೂ ಅಭಿವೃದ್ಧಿ ವಿಚಾರ ಸಂಕಿರಣ’ವು ಶಿರ್ವದ ಪೆರ್ನಾಲ್ನ ಆದಿವಾಸಿ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2026 ದಸರಾದಲ್ಲಿ ವೈಭವ ಕಂಬಳ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.
ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆನಗರ ಮುಖ್ಯ ರಸ್ತೆಯ ಬದಿಯ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್ಗಳನ್ನು ತೆರವುಗೊಳಿಸಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇತ್ತೀಚೆಗೆ ಕೆನರಾ ಕಾಲೇಜಿನ (ಸ್ವಾಯತ್ತ), ಸೆಮಿನಾರ್ ಹಾಲ್ನಲ್ಲಿ ಎಂ.ಕಾಂ. ವಿಭಾಗದ ಓರಿಯೆಂಟೇಶನ್ ಕಾರ್ಯಕ್ರಮವನ್ನು ನೂತನ ಎಂ.ಕಾಂ. ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಹಾಗೂ ಅವರ ಶೈಕ್ಷಣಿಕ ಪಯಣಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಭೀಕರ ಗಣಿ ದುರಂತ ಸಂಭವಿಸಿದ ಘಟನೆ ಮಧ್ಯ ಆಫ್ರಿಕಾ ಗಣರಾಜ್ಯದ ಪಶ್ಚಿಮ ಭಾಗದಲ್ಲಿ ನಡೆದಿದೆ. ಕನಿಷ್ಠ 30 ಚಿನ್ನದ ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರ್ಣಗೊಳಿಸಿರುವ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಾಧನೆಗಾಗಿ 25 ಗಂಟೆಗಳ ಕಾಲ ನಿರಂತರವಾಗಿ ದಾಸರಪದಗಳನ್ನು ಹಾಡುವ ಐತಿಹಾಸಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹೋಟೆಲ್ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮಗು ಸೇರಿ ಕನಿಷ್ಠ 9 ಮಂದಿ ಮೃತಪಟ್ಟಿರುವ ಘಟನೆ ಕೋಲ್ಕತ್ತಾದಲ್ಲಿ ಬುಧವಾರ ಸಂಭವಿಸಿದೆ.
ಪ್ರತಿ ಹುಟ್ಟಿನ ಹಿಂದಿರುವ ರಹಸ್ಯವನ್ನು ತಿಳಿಯಲು ಆತ್ಮ ಜ್ಞಾನಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ‘ಆತ್ಮ-ಪರಮಾತ್ಮʼ ಜೀವನದ ಸತ್ಯ ದರ್ಶನ.. ಒಳ ಚಿಂತನ ಶಿಬಿರವು ಅ. 23 ರಂದು ಆದಿತ್ಯವಾರ ಬೆಳಗ್ಗೆ 9.30 ಕ್ಕೆ ಶ್ರೀ ಗೋಪಾಲಕೃಷ್ಣ ಅಸಣ್ಣ ಸಭಾಭವನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ವ್ಯಾಪ್ತಿಯ ಸ್ಥಳೀಯರಿಗೆ ಸಾಸ್ತಾನ ಮತ್ತು ಶಿರೂರು ಟೋಲ್ ಕೇಂದ್ರಗಳ ಮಾದರಿಯಲ್ಲಿ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ಸೌಲಭ್ಯ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗೆ ಶಿಫಾರಸು ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಜಾಗದ ಗಡಿ ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ಹಲ್ಲೆ ಹಾಗೂ ಬೆದರಿಕೆ ಆರೋಪಕ್ಕೆ ತಿರುಗಿದ ಘಟನೆ ಆಲೂರು ಗ್ರಾಮದಲ್ಲಿ ನಡೆದಿದೆ.
ನವೀನ್ ಸೂರಿಂಜೆ ಕಟೀಲು ಮೇಳದ ಆಪಾದನೆಗೆ ಕಟೀಲು ದೇವಸ್ಥಾನದ ಪ್ರದಾನ ಅರ್ಚಕರಲ್ಲಿ ಹರಿ ನಾರಾಯಣ ಅಸ್ರಣ್ಣ ಪ್ರತಿಕ್ರಿಯೆ ನೀಡಿದ್ದಾರೆ
ದ್ವಿಚಕ್ರವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ , ಮೃತರನ್ನು ನಾರಾಯಣ(31) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರ ಕೊಟ್ಲು ಟೋಲ್ ಗೇಟ್ ಅವಧಿ ಮತ್ತು ನಿಯಮ ಮೀರಿ ಕಳೆದ 25 ವರ್ಷಗಳಿಂದ ಅವೈಜ್ಞಾನಿಕ ರಸ್ತೆಯಲ್ಲಿ ಟೂಲ್ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಎಸ್ ಡಿ ಪಿ ಐ ಪಕ್ಷದ ನೇತೃತ್ವದಲ್ಲಿ ಇಂದು ಬ್ರಹ್ಮರ ಕೊಟ್ಲು ಟೋಲ್ ಗೇಟ್ ಬಳಿಯಿಂದ ಡಿ ಸಿ ಕಚೇರಿ ಚಲೋ ಜಾಥಾ ನಡೆಯಿತು.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟವಾಗಿದ್ದು 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ಪ್ರಕಟಿಸಿದೆ. ಆದರೆ ಈ ಬಾರಿ ಪ್ರತಿಷ್ಠಿತ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಯಾವುದೇ ಕ್ರೀಡಾಪಟುವಿಗೂ ನೀಡದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ.