ಉಡುಪಿ: ಎರಡು ಖಾಸಗಿ ಬಸ್ ಗಳ ಚಾಲಕರು ಹಾಗೂ ನಿರ್ವಾಹಕರ ಮಧ್ಯೆ ಒವರ್ ಟೇಕ್ ವಿಚಾರಕ್ಕೆ ಮನಸ್ತಾಪ ಉಂಟಾಗಿ ಪಡುಬಿದ್ರಿ ಮುಖ್ಯ ಪೇಟೆಯಲ್ಲಿ ಬಸ್ ಅನ್ನು ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಡುಬಿದ್ರಿ ಪೇಟೆಯಲ್ಲಿ ಬಸ್ ಚಾಲಕರ ನಿರ್ವಾಹಕರ ಇಂತಹ ವರ್ತನೆ ಇದು ಮೊದಲಲ್ಲ, ಈ ಹಿಂದೆಯೂ ಹಲವು ಬಾರಿ ನಡೆದಿದ್ದು, ಮತ್ತೆ ಮರುಕಳಿಸುವ ಮೂಲಕ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರು ಪ್ರಶ್ನಿಸುವಂತಾಗಿದೆ.
ಈ ಬಾರಿ ಬಸ್ ಚಾಲಕ ನಿರ್ವಾಹಕರ ದುರ್ವತನೆಯ ವಿರುದ್ಧ ಪೊಲೀಸರ ಮುಂದೆಯೇ ಸಾರ್ಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಘಟನೆಯಿಂದಾಗಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿತಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಯಿತು. ದರ್ಪ ತೋರಿದ ಬಸ್ ಚಾಲಕ ನಿರ್ವಾಹಕರಿಗೆ ಎಚ್ಚರಿಕೆ ನೀಡಿ ಕಳಿಸಲಾಯಿತು.

